ಮತದಾನ ಜಾಗೃತಿ ಗೀತೆ ಪ್ರಚಾರಕ್ಕೆ ಚಾಲನೆ
ಮೂಡುಬಿದಿರೆ: ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ, ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ಮೂಡುಬಿದಿರೆ ಸ್ವೀಪ್ ಸಮಿತಿ ವತಿಯಿಂದ ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ನಲ್ಲಿ ಮತದಾನ ಜಾಗೃತಿ ಗೀತೆಯನ್ನು ಸ್ವಚ್ಚತಾ ವಾಹಿನಿಯಲ್ಲಿ ಪ್ರಚಾರ ಮಾಡಲು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್. ವೆಂಕಟಚಲಪತಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಂತರ ಶ್ರೀ ತುಳಸಿ ಸಂಜೀವಿನಿ ಮಾಸಿಕ ಸಭೆಯಲ್ಲಿ ಭಾಗವಹಿಸಿ ಮತದಾನದ ಕುರಿತಾದ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿದ ಅವರು ಮಹಿಳೆಯರಿಗೆ ಸರಕಾರವು ವಿವಿಧ ಯೋಜನೆಯನ್ನು ಪರಿಚಯಿಸಿಯಿಸಿದ್ದು ಅವುಗಳನ್ನು ಪಡೆದುಕೊಂಡು ಸದೃಢರಾಗಬೇಕೆಂದರ.
ಗ್ರಾಮ ಮಟ್ಟದಲ್ಲಿರುವ ಸಂಜೀವಿನಿ ಒಕ್ಕೂಟ ರಚನೆಯ ಸಂದರ್ಭದಲ್ಲೂ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆಯನ್ನು ಅವರ ನಾಯಕತ್ವ ಹಾಗೂ ಕೆಲಸದ ಕೌಶಲ್ಯವನ್ನು ನೋಡಿಕೊಂಡು ಆಯ್ಕೆ ಮಾಡಲಾಗುವುದು. ಅದರಂತೆ ಎಪ್ರಿಲ್ 26 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುಳ ಹುನಗುಂದ, ಎನ್ ಆರ್ ಎಲ್ ಎಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಶೋಕ್, ಐಇಸಿ ಸಂಯೋಜಕಿ ಅನ್ವಯ, ಒಕ್ಕೂಟದ ಉಪಾಧ್ಯಕ್ಷೆ ನಳಿನಿ, ಎಂಬಿಕೆ ಪ್ರತಿಭಾ, ಎಲ್ ಸಿ ಆರ್ ಪಿ ಶುಭಮಣಿ,ಸುಧಾ, ಪಂಚಾಯತ್ ಸಿಬ್ಬಂದಿಗಳಾದ ಪ್ರತಿಭಾ, ಯಶೋಧರ್, ಚಂದ್ರಿಕಾ, ವೈಷ್ಣವಿ, ಸತೀಶ್ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
0 Comments