ಮೂಡುಬಿದಿರೆ: ಜೆ.ಎ.ಅಕಾಡೆಮಿಯಿಂದ ಮಹಿಳಾ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಜೆ.ಎ.ಅಕಾಡೆಮಿಯಿಂದ ಮಹಿಳಾ ದಿನಾಚರಣೆ

*ಸಾಧಕ ಮಹಿಳೆಯರಿಗೆ ಸನ್ಮಾನ



ಮೂಡುಬಿದಿರೆ:  ಇಲ್ಲಿನ ಜೆ.ಎ.ಅಕಾಡೆಮಿ ತರಬೇತಿ ಸಂಸ್ಥೆಯ ವತಿಯಿಂದ ಶುಕ್ರವಾರ  ಮಹಿಳಾ ದಿನವನ್ನು ಆಚರಿಸಲಾಯಿತು.

 ಜಾನಪದ ಪರಿಷತ್ ನ ಮೂಡುಬಿದಿರೆ ತಾಲೂಕಿನ ಅಧ್ಯಕ್ಷೆ ಪದ್ಮಶ್ರೀ ಭಟ್ ನಿಡ್ಡೋಡಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

  ಸಾಧಕರಿಗೆ ಸನ್ಮಾನ : ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ  ದೀಪ್ತಿ ಭಟ್( ಸಾಂಸ್ಕೃತಿಕ ರಂಗ), ಪ್ರೇಮಶ್ರೀ ಕಲ್ಲಬೆಟ್ಟು (ಪತ್ರಿಕಾರಂಗ), ದೇಜಮ್ಮ, ಹೇಮಲತಾ (ಸ್ವ ಉದ್ಯೋಗ), ಆರಾಧನ ಭಟ್ ಪರವಾಗಿ ಅವರ ತಾಯಿ ಪದ್ಮಶ್ರೀ ಭಟ್( ಸಮಾಜಸೇವೆ ಮತ್ತು ಕಲೆ) ಮತ್ತು ಪವಿತ್ರಾ ವಿನಯ್ ಮಯ್ಯ( ಸಂಗೀತ ಕ್ಷೇತ್ರ) ಇವರುಗಳನ್ನು ಸನ್ಮಾನಿಸಲಾಯಿತು.

 ಜಾನಪದ ಪರಿಷತ್ ನ ಸಂಚಾಲಕಿ ಚೇತನಾ ರಾಜೇಂದ್ರ ಹೆಗಡೆ ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಿದರು.

ಉದ್ಯಮಿ ಕೆ.ಶ್ರೀಪತಿ ಭಟ್, ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಸರಿತಾ ಆಶೀರ್ವಾದ್, ಜೆ.ಎ.ಅಕಾಡೆಮಿಯ ಸಂಸ್ಥೆಯ ಸಂಸ್ಥಾಪಕ ಡಾ.ಶಿವರಾಜ, ಅತಿಥಿಗಳಾಗಿ ಭಾಗವಹಿಸಿದ್ದರು.

  ಸಹನಾ ಭಂಡಾರ್ ಕರ್, ಅಭಿಷೇಕ್ ಶೆಟ್ಟಿ, ಮಲ್ಲಿಕಾ ಸುಕೇಶ್, ಸಂಗೀತ ವಿದ್ವಾನ್ ಡಾ.ಸೋಮಶೇಖರ ಮಯ್ಯ ಸನ್ಮಾನಿತರನ್ನು ಪರಿಚಯಿಸಿದರು.

  ನಂತರ "ವಾಯ್ಸ್ ಆಫ್ ಆರಾಧನಾ" ತಂಡದ ಮಕ್ಕಳು ಹಾಗೂ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಂಪ್ರಾದಾಯಿಕ ಉಡುಗೆಯ "ಫ್ಯಾಶನ್ ಶೋ" ಕಾರ್ಯಕ್ರಮ ಪ್ರಸ್ತುತಗೊಂಡಿತು.

Post a Comment

0 Comments