ಜಿಲ್ಲೆ ಹಿಂದುತ್ವದ ಭದ್ರ ಕೋಟೆ ಎಂಬ ಭ್ರಮೆಯಿಂದ ಹೊರಬನ್ನಿ : ಪದ್ಮರಾಜ್

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

 * ಜಿಲ್ಲೆ ಹಿಂದುತ್ವದ ಭದ್ರ ಕೋಟೆ ಎಂಬ ಭ್ರಮೆಯಿಂದ ಹೊರಬನ್ನಿ : ಪದ್ಮರಾಜ್ 

ಮೂಡುಬಿದಿರೆ: ಕಳೆದ 35 ವರ್ಷಗಳ ಹಿಂದೆ ಕಾಂಗ್ರೆಸ್ ನ ಸಂಸದರು ಸಂಪತ್ತಿನಲ್ಲಿದ್ದರು ಆಗ ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆಗಳು ಅಸ್ವಿತ್ವಕ್ಕೆ ಬಂದಿತ್ತು ಮತ್ತು  ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಆದರೆ ಬಿಜೆಪಿಯ ಎಂಪಿಗಳು ಆಯ್ಕೆಯಾದ ನಂತರ ನೆನಪಿನಲ್ಲಿ ಉಳಿಯುವಂತಹ  ಯಾವುದೇ ಅಭಿವೃದ್ಧಿ ಪ್ರಾಜೆಕ್ಟ್ ಗಳು ಬಂದಿಲ್ಲ. ಕಾಂಗ್ರೆಸ್ ಬಲಿದಾನ ಮತ್ತು ಬಡವರ ಪರವಾಗಿ ನಿಂತ ಪಕ್ಷ ಬಿಜೆಪಿಯವರು ಹೇಳುವಂತೆ ಈ ಜಿಲ್ಲೆ ಹಿಂದುತ್ವದ ಭದ್ರಕೋಟೆಯಲ್ಲ ಆ ಭ್ರಮೆಯನ್ನು ಬಿಟ್ಟುಬಿಡಿ ಎಂದು  ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಹೇಳಿದರು.

   ಅವರು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮಾಜ ಮಂದಿರದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಗೆ 1990ರಿಂದ ಸೋಲಾಗಿದೆ. ಆದರೆ ನಂತರ ಬಂದ ಬಿಜೆಪಿಯ ಎಂಪಿ ನಂಬರ್ ವನ್ ಎಂಪಿ ಎಂದು ಹೇಳುತ್ತಿದ್ದರು. ಆದರೆ ನಂಬರ್ ವನ್ ಆಗಿದ್ದ ಅಭ್ಯರ್ಥಿಯನ್ನು ಬಿಜೆಪಿ ಬದಲಾವಣೆ ಮಾಡುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ ಪದ್ಮರಾಜ್ ಅವರು ಇದೀಗ ಬದಲಾವಣೆಯ ಗಾಳಿ ಬೀಸಿದೆ. ಹಿಂದೆ ಜಿಲ್ಲೆಯಲ್ಲಿದ್ದ ಸಾಮರಸ್ಯದ ಗತವೈಭವವನ್ನು ಮತ್ತೆ ಮರುಕಳಿಸಬೇಕಾಗಿದೆ. ಧ್ವೇಷ, ಸೇಡು ಸಾಧಿಸದೆ ಕಾಂಗ್ರೆಸ್ ನ ಅಭಿವೃದ್ಧಿ ಯೋಜನೆಗಳನ್ನು ಮತ್ತು ಸಾಧನೆಗಳನ್ನು ಹಿಡಿದುಕೊಂಡು ಪ್ರೀತಿಯಿಂದ ಜನರ ಬಳಿಗೆ ಹೋಗಿ ಮತವನ್ನು ಯಾಚಿಸಿ ಎಂದರು.


  ರಾಜ್ಯ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರೇ ನಮ್ಮ ಉಸಿರು. ನಮ್ಮ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕಳೆದ ಹದಿನೈದು ವರ್ಷಗಳಿಂದ ಸಂಸತ್ ನಲ್ಲಿ ಮಾತನಾಡುವ ಸ್ವರ ಇಲ್ಲದಂತ್ತಾಗಿದೆ. ನಮ್ಮ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿ ಬಂದರೆ  ಸಂಸತ್ತಿನಲ್ಲಿ ಸ್ವರ ಬರಲು ಸಾಧ್ಯವಾಗುತ್ತದೆ. ಗ್ಯಾರಂಟಿಗಳನ್ನು ವಿರೋಧಿಸುವವರು ನಿಮ್ಮ ಮನೆ ಬಾಗಿಲಿಗೆ ಮತ ಕೇಳಲು ಬಂದಾಗ ಹಾಕಿ ಎಂದು ಸಲಹೆ ನೀಡಿದರು.

  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದೇಶದಲ್ಲಿ ಎನ್ ಡಿ ಎ ಸರಕಾರ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಇರಲ್ಲ ಆದ್ದರಿಂದ ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದ ಅವರು ಗ್ಯಾರಂಟಿ ಮಾರಕ ಎಂದು ಹೇಳುತ್ತಿದ್ದವರೇ ಈಗ ಗ್ಯಾರಂಟಿಗಳನ್ನು ಜಾರಿಗೆ ತರಲು ಹೊರಟಿದ್ದಾರೆಂದು ವ್ಯಂಗ್ಯವಾಡಿದರು.

  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಪ್ರಾಸ್ಯಾವಿಕವಾಗಿ ಮಾತನಾಡಿ ಈ ಚುನಾವಣೆ ಜಾತಿ ಜಾತಿಗಳ ಮಧ್ಯೆ ಆಗಬಾರದು ಇದು ಅಭಿವೃದ್ಧಿ ಚುನಾವಣೆಯಾಗಬೇಕು. ಬಿಜೆಪಿಯವರು ಕಾರ್ಯಕರ್ತರನ್ನು ದುಡಿಸಿ ನಂತರ ಕೈ ಕೊಡುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ನಮ್ಮಲ್ಲಿ ಅಭ್ಯರ್ಥಿಯ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ ಎಲ್ಲರೂ ಒಗ್ಗಟ್ಟಾಗಿ ಅತ್ಯಧಿಕ ಮತಗಳಿಂದ ಮುನ್ನಡೆಯನ್ನು ಕಾಯ್ದುಕೊಳ್ಳುವಂತೆ ಮಾಡುತ್ತೇವೆಂದು ಭರವಸೆ ನೀಡಿದರು.

  ಮೂಡುಬಿದಿರೆ ಬ್ಲಾಕ್ ಚುನಾವಣಾ ಉಸ್ತುವಾರಿ ಗುರುರಾಜ್, ಚುನಾವಣಾ ವೀಕ್ಷಕ ವಸಂತ್ ಬೆರ್ನಾಡ್, ಮೂಡುಬಿದಿರೆ ನಗರಾಧ್ಯಕ್ಷ ಪುರಂದರ ದೇವಾಡಿಗ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ, ಮುಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ,  ಎಸ್ ಸಿ, ಎಸ್ ಟಿ ಘಟಕದ ಅಧ್ಯಕ್ಷ ಜಯಕುಮಾರ್, ವಿವೇಕ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಪ್ರಚಾರ ಸಮಿತಿಯ ಅಧ್ಯಕ್ಷ ಮಹಮ್ಮದ್ ಅಸ್ಲಾಂ, ಅಲ್ಪಸಂಖ್ಯಾತ  ಘಟಕದ ಅಧ್ಯಕ್ಷ ಮಹಮ್ಮದ್ ಬಶೀರ್, ಕೆಪಿಸಿಸಿ ಸದಸ್ಯ ಚಂದ್ರಹಾಸ ಸನಿಲ್, ಎನ್ ಎಸ್ ಯು ಐನ ಅಧ್ಯಕ್ಷ ಮನೀಶ್ ಪೂಜಾರಿ,  ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments