ಲೋಕಸಭಾ ಚುನಾವಣೆ : ಪೊಲೀಸರಿಂದ ಪೇಟೆಯಲ್ಲಿ ಪಥ ಸಂಚಲನ
ಮೂಡುಬಿದಿರೆ: ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಮೂಡುಬಿದಿರೆಯ ಪೊಲೀಸ್ ಸಿಬಂದಿಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬಂಧಿಗಳು ಶುಕ್ರವಾರ ಬೆಳಿಗ್ಗೆ ಪಥ ಸಂಚಲನ ನಡೆಸಿದರು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 242 ಬೆಟಾಲಿಯನ್ ಸಿಆರ್ ಪಿ ಕೆ.ಎ.ಮಹಾಧಿಕ್ ನೇತೃತ್ವದಲ್ಲಿ ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿಯಿಂದ ಆರಂಭಗೊಂಡು ಮೂಡುಬಿದಿರೆ ಪೇಟೆ
ಮೂಲಕ ಕನ್ನಡ ಭವನದವರೆಗೆ ಪಥ ಸಂಚಲನ ನಡೆಯಿತು.
ಪೊಲೀಸ್ ಉಪ ನಿರೀಕ್ಷಕರಾದ ನಂಜಾ ನಾಯ್ಕ್, ಮಂಜುನಾಥ್ ಬೋರ್ಕರ್ ಮತ್ತು ಸಿಬಂಧಿಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 20 ಮಂದಿ ಸಿಬಂದಿಗಳು ಸಹಿತ 50 ಮಂದಿ ಈ ಪಥ ಸಂಚಲನದಲ್ಲಿ ಪಾಲ್ಗೊಂಡರು.
0 Comments