ತಾಲೂಕಿನ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಇಓ

ಜಾಹೀರಾತು/Advertisment
ಜಾಹೀರಾತು/Advertisment

 ತಾಲೂಕಿನ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಇಓ

ಮೂಡುಬಿದಿರೆ : ತಾಲೂಕಿನಲ್ಲಿ ಮಾದರಿ ಮತಗಟ್ಟೆ ಎಂದು  ಆಯ್ಕೆಯಾಗಿರುವ ಗ್ರಾಮ ಪಂಚಾಯತ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಮತಗಟ್ಟೆಗಳಿಗೆ ನೂತನ ತಾಲೂಕು ಕಾರ್ಯನಿರ್ವಾಹಕ‌ ಅಧಿಕಾರಿ ಎಸ್. ವೆಂಕಟಾಚಲಪತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 



 ಮತಗಟ್ಟೆಗೆ ಸಂಬಂಧಿಸಿದ ಶಾಲೆಗಳಿಗೆ ಭೇಟಿ ನೀಡಿದ ಕಾರ್ಯನಿರ್ವಾಹಕಾಧಿಕಾರಿ ಅವರು ಅಲ್ಲಿರುವ ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ, ವಿದ್ಯುತ್ ಸರಬರಾಜು ಹಾಗೂ ರ್ಯಾಂಪ್ ಗಳು ಸೇರಿದಂತೆ ಚುನಾವಣಾ ದಿನದ ಮುಂಚಿತವಾಗಿ ಎಲ್ಲಾ ಮತಗಟ್ಟೆಗಳಲ್ಲಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಸಂಬಂಧಪಟ್ಟ ಶಾಲಾ ಶಿಕ್ಷಕರಿಗೆ ತಿಳಿಸಿದರು.


 ಅಲ್ಲದೆ ಸಖೀ ಎಂಬ ವಿಷಯಕ್ಕೆ ಆಯ್ಕೆಯಾದ ಮಾದರಿ ಮತಗಟ್ಟೆಗಳಿಗೆ ಅಲಂಕಾರವನ್ನು ಮಾಡಿ, ಸ್ವಸಹಾಯ ಗುಂಪಿನ‌‌ ಮಹಿಳೆಯರಿಂದ ರಂಗೋಲಿಗಳನ್ನು ಬಿಡಿಸಿ, ಮತಗಟ್ಟೆಯನ್ನು ಅಕರ್ಷಕಗೊಳಿಸುವಂತೆಯೂ ಸೂಚಿಸಿದರು.

 

ಹೊಸಬೆಟ್ಟು ಹಾಗೂ ದರೆಗುಡ್ಡೆ ಗ್ರಾಮ‌ ಪಂಚಾಯತ್ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆಯಲ್ಲಿ ಮತದಾನದ ಮಹತ್ವ ತಿಳಿಸಿ ಮತದಾನದ ಕುರಿತಾದ ಪ್ರತಿಜ್ಞಾವಿಧಿಯನ್ನು‌ ಬೋಧಿಸಿದರು.

ನಂತರ ಬೆಳುವಾಯಿ ಚೆಕ್ ಪೋಸ್ಟ್  ಹಾಗೂ ಮಾರೂರು ಚೆಕ್ ಪೋಸ್ಟ್ ಗೆ ತೆರಳಿ ವಾಹನಗಳ ತಪಾಸಣೆ ನಡೆಸಿದರು.

   ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕಿ ಅನ್ವಯ, ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Post a Comment

0 Comments