ಎಕ್ಸಲೆಂಟ್ ನಲ್ಲಿ ಸೈಬರ್ ಸೆಕ್ಯೂರಿಟಿ ಸ್ಕೂಲ್ ಹೈಜಿನ್ ಪ್ರೋಗ್ರಾಮ್ ಗೆ ಮೈಸೂರು ಸಂಸ್ಥಾನದ ಒಡೆಯರ್
ಮೂಡುಬಿದಿರೆ : ಸುರಕ್ಷತೆ ಮತ್ತು ಸೈಬರ್ ಭದ್ರತೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತ್ತು ಡಿಜಿಟಲ್ ವಿಚಾರದ ಬಗ್ಗೆ ಸಂಪೂರ್ಣ ಜ್ಞಾನ ಪಡೆಯಲು ಸೈಬರ್ ಸೆಕ್ಯೂರಿಟಿ ಸ್ಕೂಲ್ ಹೈಜಿನ್ ಪ್ರೋಗ್ರಾಮ್ ನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಮೈಸೂರ್ ಸಂಸ್ಥಾನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅವರು ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಸಂಸ್ಥೆಯಲ್ಲಿ ಸೈಬರ್ ಸೆಕ್ಯೂರಿಟಿ ಸ್ಕೂಲ್ ಹೈಜಿನ್ ಪ್ರೋಗ್ರಾಮ್ ಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಸೈಬರ್ ಭದ್ರತೆ ವ್ಯವಸ್ಥೆಯಲ್ಲಿ 5ಲಕ್ಷಕ್ಕೂ ಅಧಿಕ ಉದ್ಯೋಗ ಅವಕಾಶವಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡೆದುಕೊಳ್ಳುವಂತ್ತಾಗಬೇಕು. ಭಾರತದ ತಂತ್ರಜ್ಞಾನಿಗಳಿಗೆ ವಿದೇಶಗಳಲ್ಲಿ ವ್ಯಾಪಕ ಅವಕಾಶ ಇದೆ. ಐಟಿ ಕರ್ನಾಟಕದ ಹೆಮ್ಮೆಯ ಕ್ಷೇತ್ರ. ಎಂದ ಅವರು ಮೈಸೂರ್ ನಂತರ ಮೊದಲ ಬಾರಿಗೆ ದಕ್ಷಿಣ ಕನ್ನಡದ ಮೂಲಕ ಈ ಕಾರ್ಯಕ್ರಮ ಆರಂಭ ಮಾಡಲಾಗುತ್ತಿದೆ ಎಂದ ಅವರು ಮೊದಲ ವಿಶ್ವಯುದ್ಧದಲ್ಲಿ ವಿದೇಶದಲ್ಲೂ ಮೈಸೂರಿನ ಸೈನಿಕರು ದುಡಿದಿದ್ದರು. ವಿದೇಶಿಯರಿಗೆ ನೀಡಿದ್ದ ಸುರಕ್ಷತೆ ಈಗಿನ ಡಿಜಿಟಲ್ ಯುಗದಲ್ಲೂ ಸೈಬರ್ ಸೆಕ್ಯೂರಿಟಿ ರೂಪದಲ್ಲಿ ನೀಡಬಾರದೇಕೆ ಎನ್ನುವ ಕಲ್ಪನೆಯಲ್ಲಿ ಈ ಯೋಜನೆ ಮೂಡಿ ಬರುವಂತಾಯಿತು ಎಂದವರು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ ಅಧ್ಯಕ್ಷತೆಯನ್ನು ವಹಿಸಿದ್ದರು.
ಎಸ್ ಡಿ ಎಂ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ ಸತೀಶ್ ಚಂದ್ರ ಎಸ್, ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ರೆಸಿಡೆನ್ಸಿಯಲ್ ಶಾಲೆಯ ಕಾರ್ಯದರ್ಶಿ ಶರಣ್ ಕುಮಾರ್, ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಕಾರ್ಯಕ್ರಮದ ಸಂಯೋಜಕ ಪದ್ಮಪ್ರಸಾದ್ ಜೈನ್ ಉಪಸ್ಥಿತರಿದ್ದರು.
0 Comments