ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬನ್ನಡ್ಕ ಕ್ಷೇತ್ರಕ್ಕೆ ರೂ 2 ಲಕ್ಷ ಅನುದಾನ
ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಿ.ಸಿ.ಟ್ರಸ್ಟ್ ಮೂಡುಬಿದಿರೆ ತಾಲೂಕು ವತಿಯಿಂದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಪಡುಮಾರ್ನಾಡು ಗ್ರಾಮದ ಶ್ರೀ ಬನ್ನಡ್ಕತ್ತಾಯ ದೈವಸ್ಥಾನದ ಜೀರ್ಣೋದ್ಧಾರಕ್ಕಾಗಿ ರೂ.2ಲಕ್ಷ ಮೊತ್ತದ ಚೆಕ್ಕನ್ನು ಡಿಡಿಯನ್ನು ತಾಲೂಕಿನ ಯೋಜನಾಧಿಕಾರಿ ಸುನೀತಾ ಹಸ್ತಾಂತರಿಸಿದರು.
ದೈವಸ್ಥಾನದ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್, ಕಾರ್ಯದರ್ಶಿ ಜಗತ್ಪಾಲ ಹೆಗ್ಡೆ, ಅರುಣ್ ಪ್ರಕಾಶ್ ಶೆಟ್ಟಿ, ಗೌರವಾಧ್ಯಕ್ಷ ರಘುಚಂದ್ರ ಬಲ್ಲಾಳ್, ದಯಾನಂದ ಪೈ, ಪಾಂಡುರಂಗ, ವಲಯ ಮೇಲ್ವೀಚಾರಕ ವಿಠ್ಠಲ್, ಸೇವಾ ಪ್ರತಿನಿಧಿ ಉಷಾಕಿರಣ್ ಈ ಸಂದರ್ಭದಲ್ಲಿದ್ದರು.
0 Comments