ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ‘ಸ್ವಸ್ಥ ಸಮಾಜದೆಡೆಗೆ ನಮ್ಮ ನಡೆ’ ಸ್ವಾಸ್ಥ ಸಂಕಲ್ಪ, ಸ್ವಚ್ಛತಾ ಅಭಿಮಾನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ
ಮೂಡುಬಿದಿರೆ : ಸ್ವಸ್ಥ ಮನಸ್ಸು ನಮ್ಮ ಜೀವನ ಪದ್ಧತಿಯಾಗಬೇಕು. ಜೀವನದುದ್ದಕ್ಕೂ ಸಾಧನೆಯ ಹಾದಿಯಲ್ಲಿ ಸಾಗುವ ಮನುಷ್ಯ ಮಾಲಿನ್ಯ ರಹಿತವಾದ ಯೋಚನೆ ಹಾಗೂ ಜೀವನ ಶೈಲಿಯನ್ನು ರೂಢಿಸಿಕೊಂಡರೆ ಬೆಳವಣಿಗೆ ಶತಸಿದ್ಧ. ಶೂನ್ಯ ತಾಜ್ಯದ ಪರಿಕಲ್ಪನೆಯಿಂದ ಮೈ ಮನಸ್ಸುಗಳು ಬೆಳಕಿನಡೆಗೆ ಸಾಗುತ್ತದೆ ಎಂದು ಸಚಿವ ದಿನೇಶ್ ಗುಂಡುರಾವ್ ಹೇಳಿದರು.
ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ‘ಸ್ವಸ್ಥ ಸಮಾಜದೆಡೆಗೆ ನಮ್ಮ ನಡೆ’ ಸ್ವಾಸ್ಥ ಸಂಕಲ್ಪ ಮತ್ತು ಸ್ವಚ್ಛತಾ ಅಭಿಮಾನ ಕಾ
ರ್ಯಕ್ರಮ ಉದ್ಘಾಟಿಸಿ ಮಾತಾಡಿದರು.
ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿದರು. ವರ್ಲಿಚಿತ್ರ, ಸ್ವಸ್ಥ ಪರಿಸರ ಸ್ವಚ್ಛ ವಾತಾವರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಎಕ್ಸಲೆಂಟ್ ಸಂಸ್ಥೆ ಎನ್.ಎಸ್.ಎಸ್, ರೆಡ್ ಕ್ರೊಸ್, ಎನ್.ಸಿ.ಸಿ, ರೋವರ್ಸ್, ರೇಂಜರ್ಸ್ ಳೊಂದಿಗೆ ಸದಾ ಸರ್ವದಾ ಕೈ ಜೋಡಿಸುತ್ತಾ ಮುಂದುವರಿಯುತ್ತದೆ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಉಪಸ್ಥಿತರಿದ್ದರು.
ಯುವರಾಜ ಜೈನ್ ಸ್ವಾಗತಿಸಿದರು. ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments