ಪಣಪಿಲದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸತ್ಯನಾರಾಯಣ ಪೂಜೆ-ಪದಗ್ರಹಣ ಕಾರ್ಯಕ್ರಮ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಣಪಿಲ ಎ ಹಾಗೂ ಬಿ ಒಕ್ಕೂಟ ಮತ್ತು ಪಣಪಿಲ ಕಲ್ಲೇರಿ ಕುಕ್ಕಿನಂತಾಯ, ಉಮಲತ್ತಡೆ ಶ್ರೀ ಧರ್ಮರಸು, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗರಡಿ ಅಳಿಯೂರು ಇದರ ವತಿಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
ವೇದಮೂರ್ತಿ ಮುರುಳಿಕೃಷ್ಣ ಭಟ್ ರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ಖ್ಯಾತ ವಾಗ್ಮಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮುನಿರಾಜ್ ರೆಂಜಾಳ ಧಾರ್ಮಿಕ ಭಾಷಣ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಮುನಿರಾಜ್ ಹೆಗ್ಡೆ ಯವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಜಲೋಡಿ ಗುತ್ತು ಪ್ರಮುಖರಾದ ಪ್ರಮೋದ್ ಆರಿಗ, ದೈವಸ್ಥಾನ ಗರಡಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರವೀಣ್ ಭಟ್ ಕಾನಂಗಿ, ಜನಜಾಗೃತಿ ವೇದಿಕೆಯ ಶಿರ್ತಾಡಿ ವಲಯಾಧ್ಯಕ್ಷ ಲಕ್ಷ್ಮಣ ಸುವರ್ಣ, ಗ್ರಾಮಾಭಿವೃದ್ಧಿ ಯೋಜನೆಯ ವಲಯಾಧ್ಯಕ್ಷ ಶ್ರೀಧರ ಬಂಗೇರ, ಪಣಪಿಲ ಎ ಒಕ್ಕೂಟದ ಅಧ್ಯಕ್ಷರಾದ ದೀಕ್ಷಿತ್ ಪಣಪಿಲ, ಬಿ ಒಕ್ಕೂಟದ ಅಧ್ಯಕ್ಷರಾದ ಜಯ ಪೂಜಾರಿ, ಲೆಕ್ಕ ಪರಿಶೋಧಕರಾದ ನಾಗೇಶ್ ಹಾಗೂ ಇತರರು ಉಪಸ್ಥಿತರಿದ್ದರು.
ಮೇಲ್ವಿಚಾರಕರಾದ ಶಿವಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು, ಸೇವಾ ಪ್ರತಿನಿಧಿ ಲತಾ ವರದಿ ಮಂಡಿಸಿದರು. ಸುನಿಲ್ ಪಣಪಿಲ ಸ್ವಾಗತಿಸಿದರು ಹಾಗೂ ರಾಮಪ್ಪ ಮೂಲ್ಯ ವಂದಿಸಿದರು.
0 Comments