ಸಹಕಾರ ಡಿಪ್ಲೊಮಾ ಕೋರ್ಸ್' ಗೆ ಅರ್ಜಿ ಆಹ್ವಾನ'

ಜಾಹೀರಾತು/Advertisment
ಜಾಹೀರಾತು/Advertisment

 'ಸಹಕಾರ ಡಿಪ್ಲೊಮಾ ಕೋರ್ಸ್' ಗೆ  ಅರ್ಜಿ ಆಹ್ವಾನ'    


                          

    ಮೂಡುಬಿದಿರೆ:ಲಾಡಿಯಲ್ಲಿರುವ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೊಆಪರೇಟಿವ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ  ೬ ತಿಂಗಳ ಅವಧಿಯ 'ಸಹಕಾರ ಡಿಪ್ಲೋಮಾ' ಕೋರ್ಸ್ಗೆ'' ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಂದ ಮತ್ತು ಎಲ್ಲಾ ವಿವಿಧ ಸಹಕಾರ ಸಂಘ, ಬ್ಯಾಂಕ್‌ಗಳ ಉದ್ಯೋಗಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


    ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿಯಾಗಿದ್ದು, ಪ್ರವೇಶ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮಾಸಿಕ ರೂ.೬೦೦ ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳಿಗೆ ರೂ ೫೦೦ ಶಿಷ್ಯ ವೇತನ ನೀಡಲಾಗುವುದು.   

 ಸಹಕಾರ ಡಿಪ್ಲೊಮಾ ಕೋರ್ಸ್ ಪಡೆದ ಅಭ್ಯರ್ಥಿಗಳಿಗೆ ಡಿಸಿಸಿ ಬ್ಯಾಂಕ್, ಸಹಕಾರ ಸಂಘ, ಸಂಸ್ಥೆಗಳಲ್ಲಿ ಸರಕಾರದ ನಿಯಮಾನುಸಾರ ಉದ್ಯೋಗವಕಾಶಗಳು ಸಿಗಲಿವೆ. ಅಲ್ಲದೆ ಈ ಪಠ್ಯಕ್ರಮವು ಕೆ.ಎ.ಎಸ್ ಪರೀಕ್ಷೆಯ ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯ ಮತ್ತು ಸಹಕಾರ ಇಲಾಖೆಯ ಕೋ-ಆಪರೇಟಿವ್ ಇನ್‌ಸ್ಪೆಕ್ಟರ್ ಹುದ್ದೆ ಹಾಗೂ ಎಲ್ಲಾ ಸಹಕಾರ ಸಂಘ, ಸಂಸ್ಥೆಗಳ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಪೂರಕವಾಗಿದೆ.  ಸಹಕಾರ ಸಂಘ, ಸಂಸ್ಥೆಗಳಲ್ಲಿನ ಖಾಯಂ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದೂರ ಶಿಕ್ಷಣ ಕೊರ್ಸ್ಗಳಿಗು ಪ್ರವೇಶ ನೀಡಲಾಗುವುದು. ಆಸಕ್ತರು ವಿವರಗಳಿಗೆ ಮುಖತವಾಗಿ ಭೇಟಿಯಾಗಬಹುದು ಅಥವಾ ಪ್ರಾಂಶುಪಾಲರು ಮೊಬೈಲ್ ಸಂಖ್ಯೆ ೯೩೮೦೧೬೫೦೨೩ ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0 Comments