ಪಣಪಿಲ ಕಲ್ಲೇರಿ ಹಾಗೂ ಅಳಿಯೂರು ಉಮಲತ್ತಡೆ ವಾರ್ಷಿಕ ನೇಮೋತ್ಸವ:ಆಮಂತ್ರಣ ಪತ್ರಿಕೆ ಬಿಡುಗಡೆ
ಪಣಪಿಲ, ಅಳಿಯೂರು ಹಾಗೂ ದರೆಗುಡ್ಡೆ ವ್ಯಾಪ್ತಿಗೆ ಸಂಬಂಧಿಸಿದ ಪಣಪಿಲ ಕಲ್ಲೇರಿ ಶ್ರೀ ಕುಕ್ಕಿನಂತಾಯ ದೈವ ಹಾಗೂ ಅಳಿಯೂರು ಉಮಲತ್ತಡೆ ಶ್ರೀ ಧರ್ಮರಸು, ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳರ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ವ್ಯಾಪ್ತಿಗೆ ಸಂಬಂಧಿಸಿದ ಮಜಲೋಡಿ ಗುತ್ತಿನ ಮನೆಯಲ್ಲಿ ನಡೆದ ಕೂಟದಲ್ಲಿ ಗುತ್ತು, ಬರ್ಕೆ, ಆಡಳಿತ ಮಂಡಳಿ ಹಾಗೂ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
19ನೇ ತಾರೀಖಿನಂದು ಪ್ರಧಾನ ದೈವ ಪಣಪಿಲ ಕಲ್ಲೇರಿ ಕುಕ್ಕಿನಂತಾಯ ದೈವಕ್ಕೆ ನೇಮೋತ್ಸವ, 20ನೇ ತಾರೀಖಿನಂದು ಉಮಲತ್ತಡೆ ಶ್ರೀ ಧರ್ಮರಸು ಮತ್ತು ಕೊಡಮಣಿತ್ತಾಯ ದೈವದ ನೇಮೋತ್ಸವ ಹಾಗೂ 21ನೇ ತಾರೀಖಿನಂದು ಬ್ರಹ್ಮ ಬೈದೇರುಗಳ ನೇಮೋತ್ಸವ ನಡೆಯಲಿದೆ.
0 Comments