ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಶಿರ್ತಾಡಿ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಡಿ.3ರಂದು ದೇವಸ್ಥಾನ ಸಭಾಂಗಣದಲ್ಲಿ ಜರುಗಿತು.
ಶಿರ್ತಾಡಿ ಶಿಮುಂಜೆಗುತ್ತು ಎಸ್. ಡಿ. ಸಂಪತ್ ಸಾಮ್ರಾಜ್ಯ ರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಎಲ್ಲರ ಸಹಕಾರದಿಂದ ಜೀರ್ಣೋದ್ಧಾರ ಆಗಿದೆ. ಭಕ್ತಾಧಿಗಳು ಶಕ್ತ್ಯಾನುಸಾರ ಕೊಡುಗೆ ನೀಡಿದ್ದೀರಿ. ದೇವರ ಆಲಯ ನವೀಕರಣಕ್ಕೆ ಕಾಲ ಕೂಡಿ ಬಂದಿರುವುದು ನಮ್ಮೆಲ್ಲರ ಭಾಗ್ಯ ಎಂದರು.
ವಾಲ್ಪಾಡಿ ವೇ ಮೂ ಉಮೇಶ್ ಭಟ್ ಪ್ರವರ್ತಿತ ಶ್ಲೋಕ ಗೀತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ಕೊಂಕೆ ಬಿಡುಗಡೆಗೊಳಿಸಿದರು. ಅರ್ಜುನಾಪುರಧೀಶ ತುಳು ಭಕ್ತಿಗೀತೆಯನ್ನು ವೇ. ಮೂ. ಉಮಾಶಂಕರ್ ಭಟ್ ಬಿಡುಗಡೆ ಮಾಡಿದರು. ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಸತೀಶ್ ವಿ. ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಸೇವಾ ಸಮಿತಿ ಅಧ್ಯಕ್ಷ ಬಲರಾಮ್ ಪ್ರಸಾದ್ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಅಶ್ವಿನಿ ಸಂತೋಷ್ ವೇದಿಕೆಯಲ್ಲಿದ್ದರು.
ಅಳಿಯೂರು ಶನೀಶ್ವರ ದೇವಸ್ಥಾನದಿಂದ 50ಸಾವಿರ ಮೊತ್ತವನ್ನು ಜೀರ್ಣೋದ್ಧಾರಕ್ಕೆ ಕೊಡುಗೆ ನೀಡಿದರು _. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸುದೀಪ್ ಬುಣ್ಣನ್ ಕಾರ್ಯಕ್ರಮ ನಿರೂಪಿಸಿದರು. ವೇ ಮೂ ಉಮೇಶ್ ಭಟ್ ಪೂಜಾ ವಿಧಿ_ ವಿಧಾನ ನೆರವೇರಿಸಿದರು.
0 Comments