ಜ್ಞಾನ ವಿಕಾಸ ಕೇಂದ್ರದಿಂದ ಮಹಿಳಾ ವಿಚಾರಗೋಷ್ಠಿ * ಹೆಣ್ಣು ಅಬಲೆಯಲ್ಲ ಸಬಲೆ : ಶಿಕ್ಷಕಿ ಅನಿತಾ ಶೆಟ್ಟಿ

ಜಾಹೀರಾತು/Advertisment
ಜಾಹೀರಾತು/Advertisment

 ಜ್ಞಾನ ವಿಕಾಸ ಕೇಂದ್ರದಿಂದ ಮಹಿಳಾ ವಿಚಾರಗೋಷ್ಠಿ         * ಹೆಣ್ಣು ಅಬಲೆಯಲ್ಲ ಸಬಲೆ : ಶಿಕ್ಷಕಿ ಅನಿತಾ ಶೆಟ್ಟಿ



ಮೂಡುಬಿದಿರೆ:  ಹೆಣ್ಣು ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಅಜ್ಜಿಯಾಗಿ ಹಲವು ಪಾತ್ರಗಳನ್ನು ನಿರ್ವಹಿಸುತ್ತಾಳೆ ಅಂತೆಯೇ ತಾನು ಉದ್ಯೋಗ  ಮಾಡುವ ಸಂಸ್ಥೆಯಲ್ಲಿಯೂ ಸಹೋದ್ಯೋಗಿಯಾಗಿ ಉತ್ತಮ ರೀತಿಯಲ್ಲಿ ಕರ್ತವ್ಯವನ್ನು ನಿಭಾಯಿಸಬಲ್ಲಳು. ಆಕೆಯ ದೈಹಿಕ ಸ್ಥಿತಿಗತಿಯಲ್ಲಿ ಅಸಮರ್ಥತೆ ಇರಬಹುದು ಆದರೆ ಆಕೆ ತೆಗೆದುಕೊಳ್ಳುವ ನಿರ್ಧಾರದಲ್ಲಿ ಹಿಂದೆ ಬೀಳಬಾರದು.ಮೊದಲು ನಮ್ಮಲ್ಲಿ ನಾವು ಭರವಸೆಯನ್ನು ತುಂಬಿಸಿಕೊಳ್ಳಬೇಕು ಈ ಉದ್ದೇಶಕ್ಕಾಗಿಯೇ  ಜ್ಞಾನ ವಿಕಾಸ ಕೇಂದ್ರಗಳು ಇರುವುದು ಎಂದು ಮಿಜಾರು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಅನಿತಾ ಶೆಟ್ಟಿ ಹೇಳಿದರು. 


ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಮೂಡುಬಿದಿರೆ ಇದರ ವತಿಯಿಂದ ತಾಲೂಕು ಮಟ್ಟದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದನ್ವಯ ಸಮಾಜ ಮಂದಿರದಲ್ಲಿ ಗುರುವಾರ ನಡೆದ ಮಹಿಳಾ ವಿಚಾರಗೋಷ್ಠಿ ಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ  "ಕೌಟುಂಬಿಕ ಹಾಗೂ ಔದ್ಯೋಗಿಕ ರಂಗದಲ್ಲಿ ಮಹಿಳೆಯ ದ್ವಿಮುಖ ಪಾತ್ರ" ದ ಬಗ್ಗೆ ಮಾತನಾಡಿದರು.


 ಹೆಣ್ಣಿನ ಭಾವನೆಗಳನ್ನು ಸೂಕ್ಷ್ಮವಾಗಿ ಪ್ರೀತಿಸಬೇಕಿದೆ. ನಾವು ನಮ್ಮವರನ್ನು ಎಂದಿಗೂ ಧೂಷಿಸುವ ಕೆಲಸವನ್ನು ಮಾಡಬಾರದು ಎಂದ ಅವರು ಮಹಿಳೆಯರನ್ನು ಸಬಲ ಮತ್ತು ಪ್ರಬಲರನ್ನಾಗಿಸಲು ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಮಹಿಳೆಯರನ್ನು .ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ ಉಡುಪಿ ಇದರ ಕರಾವಳಿ  ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಹಿತಿ ನೀಡಿದರು.

ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಜೊಸ್ಸಿ ಮಿನೇಜಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮನೆಯಲ್ಲಿ ಮಹಿಳೆಯಿದ್ದರೆ ಆ ಕುಟುಂಬ ಉತ್ತಮ ರೀತಿಯಲ್ಲಿರುತ್ತದೆ. ಮಹಿಳೆಗೆ ಸಾಲ ಕೊಟ್ಟರೆ ಆಕೆ ನಿಷ್ಠೆ ಮತ್ತು ಸ್ವಾಭಿಮಾನದಿಂದ ಮರುಪಾವತಿ ಮಾಡುತ್ತಾಳೆ ಎಂಬ ಭರವಸೆಯಿಂದಲೇ ಮಹಿಳೆಯರಿಗೆ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ ಹೆಗ್ಗಡೆ ದಂಪತಿಗಳು. ಈ ನಿಟ್ಟಿನಲ್ಲಿ ಮಹಿಳೆಯರ ಕಾರ್ಯಕ್ರಮಗಳು ಪೂರಕ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಜ್ಞಾನ ವಿಕಾಸದ ಉಡುಪಿ ಜಿಲ್ಲಾ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಅಮೃತಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಶ್ರಿ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಮೂಡುಬಿದಿರೆ ಯೋಜನಾಧಿಕಾರಿ ಸುನೀತಾ ಸ್ವಾಗತಿಸಿದರು.

ಮೇಲ್ವೀಚಾರಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.

  ಸಭಾ ಕಾರ್ಯಕ್ರಮದ ನಂತರ ಪುಷ್ಪಗುಚ್ಛ ಸ್ಪರ್ಧೆ ಮತ್ತು ಜ್ಞಾನ ವಿಕಾಸ ತಂಡದ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮೂಡುಬಿದಿರೆ ವಲಯದ ಮೇಲ್ವೀಚಾರಕ ವಿಠಲ್ ಮತ್ತು ಸೇವಾ ಪ್ರತಿನಿಧಿಗಳು ಈ ಸಂದರ್ಭದಲ್ಲಿದ್ದರು.

Post a Comment

0 Comments