ನೇಣು ಬಿಗಿದು ವಿದ್ಯಾರ್ಥಿ ಆತ್ಯಹತ್ಯೆ
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ದ್ವಿತೀಯ ಪಿಯುಸಿ(ಪಿಸಿಎಂಬಿ) ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡ ಘಟನೆ ನಿನ್ನೆ ರಾತ್ರಿ ವಿದ್ಯಾಗಿರಿಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ಗೋಣಿ ಬಸವೇಶ್ವರ ದೇವಸ್ಥಾನದ ಬಳಿಯ ನಿವಾಸಿ ಮಲ್ಲಪ್ಪ ಎನ್.ಕವಲೂರು ಅವರ ಪುತ್ರ, ಮನೋಜ್ ಎಂ.ಕವಲೂರು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.
ಸಂಸ್ಥೆಯ ಕಲ್ಪವೃಕ್ಷ ಬಾಯ್ಸ್ ಹಾಸ್ಟೇಲ್ ನ 5 ನೇ ಮಹಡಿಯ ವಾಶ್ ರೂಮಿನಲ್ಲಿರುವ ಟಾಯ್ಲೆಟ್ ರೂಮಿನ ಬಾಗಿಲಿನ ಅಡ್ಡಕ್ಕೆ ನೈಲಾನ್ ಹಗ್ಗವನ್ನು ಹಾಕಿ ಕುತ್ತಿಗೆಗೆ ಬಿಗಿದುಕೊಂಡು ಕೈಗಳನ್ನು ಕೇಸರಿ ಬಣ್ಣದ ಶಾಲಿನಲ್ಲಿ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಈತ ನಿನ್ನೆ ರಾತ್ರಿ 12 ಗಂಟೆಯ ವೇಳೆಗೆ ಹಾಸ್ಟೆಲ್ ನ ಒಳಗಡೆ ಅತ್ತಿಂದಿತ್ತ ತಿರುಗಾಡುತ್ತಾ ನಂತರ ಹಗ್ಗ ಮತ್ತು ಬಕೆಟನ್ನು ಟಾಯ್ಲೆಟ್ ಕಡೆಗೆ ತೆಗೆದುಕೊಂಡು ಹೋಗುವ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 Comments