ನಳಿನ್ ಕುಮಾರ್ ಕಟೀಲು ಓರ್ವನನ್ನು ಎಳೆದು ತಂದರು, ಮತ್ತೋರ್ವನನ್ನು ನಾವು ಹಿಡಿದೆವು:ಸಂಸದ ಮುನಿಸ್ವಾಮಿ ಹೇಳಿಕೆ
ಆಗಂತುಕರ ಗುಂಪೊಂದು ಕಲಾಪ ನಡೆಯುತ್ತಿದ್ದ ಸಂಸತ್ ಭವನಕ್ಕೆ ನುಗ್ಗಿ ಟಿಯರ್ ಗ್ಯಾಸ್ ಮಾದರಿಯ ಸ್ಮೋಕ್ ಬಾಂಬ್ ಸಿಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರ ಸಂಸದ ಮುನಿಸ್ವಾಮಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ವೀಕ್ಷಕರ ಗ್ಯಾಲರಿಯಿಂದ ಜಿಗಿದಿದ್ದ ಒಬ್ಬನನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲುರವರು ಎಳೆದು ತಂದಿದ್ದಾರೆ. ಈ ಕೂಡಲೇ ಐದಾರು ಸಂಸದರು ಅವರಿಗೆ ಜೊತೆಸೇರಿ ಬಂಧಿಸಿ ಮಾರ್ಷಲ್‌ಗೆ ಒಪ್ಪಿಸಿದರು.
ಮತ್ತೋರ್ವ ಆಗಂತುಕ ಸ್ಪೀಕರ್ ಸ್ಥಾನದೆಡೆಗೆ ಓಡುತ್ತಿದ್ದ. ಆತನನ್ನು ನಾವು ಏಳೆಂಟು ಮಂದಿ ಹಿಡಿದು ನಿಲ್ಲಿಸಿದ್ದೇವೆ ಎಂದು ಮುನಿಸ್ವಾಮಿ ತಿಳಿಸಿದ್ದಾರೆ.



0 Comments