ನಾಳೆಯಿಂದ ಮೂಡುಬಿದಿರೆಯಲ್ಲಿ 29 ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ -2023

ಜಾಹೀರಾತು/Advertisment
ಜಾಹೀರಾತು/Advertisment

 ನಾಳೆಯಿಂದ ಮೂಡುಬಿದಿರೆಯಲ್ಲಿ 29 ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ -2023

 


* ಕಲಾಸಕ್ತರಿಗೆ  ಉಣಬಡಿಸಲಿದೆ ಸಾಂಸ್ಕೃತಿಕ ರಸದೌತಣ, 100ಕ್ಕಿಂತಲೂ ಅಧಿಕ ದೇಶೀಯ ಕಲಾ ತಂಡಗಳಿಂದ ಭವ್ಯ ಸಾಂಸ್ಕೃತಿಕ ಮೆರವಣಿಗೆಯ ಮೆರಗು


ಮೂಡುಬಿದಿರೆ: ಕಳೆದ 28 ವರ್ಷಗಳಿಂದ ರಾಷ್ಟ್ರ- ಅಂತರಾಷ್ಟ್ರಮಟ್ಟದ ಕಲಾವಿದರನ್ನು ಮೂಡುಬಿದಿರೆಯ ಎಂಬ ಗ್ರಾಮೀಣ ಪ್ರದೇಶಕ್ಕೆ ಕರೆಸಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರಪಡಿಸುವ ಮೂಲಕ  ಮೂಡುಬಿದಿರೆಯ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ  ಪರಿಚಯಿಸಿದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೀಗ 29 ನೇ ವರ್ಷದ ಸಡಗರಕ್ಕೆ ಸಜ್ಜಾಗಿದ್ದು  ನಾಳೆಯಿಂದ( ಗುರುವಾರ)ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಲಾಸಕ್ತರಿಗೆ ರಸದೌತಣ ನೀಡಲಿದೆ.


 ಕಲಾ ರಸಿಕ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ಸಾರಥ್ಯದಲ್ಲಿ ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಿ ಜೈನ ಕಾಶಿ ಮೂಡುಬಿದಿರೆಯ ಸಾವಿರ ಕಂಬದ ಬಯಲು ರಂಗ ಮಂದಿರದಲ್ಲಿ 'ಸ್ಪಿಕ್ ಮೆಕೆ ವಿರಾಸತ್' ಎಂಬ ಹೆಸರಿನೊಂದಿಗೆ ಆರಂಭಗೊಂಡಿರುವ   ಸಾಂಸ್ಕೃತಿಕ ಉತ್ಸವ ನಂತರ 2000 ಇಸವಿಯಲ್ಲಿ ಮಿಜಾರಿನ ಶೋಭಾವನಕ್ಕೆ ಸ್ಥಳಾಂತರಗೊಂಡು ವೈಭವಯುತವಾಗಿ ನಡೆಯಲು ಆರಂಭಿಸಿತು. ಆನಂತರ ಎರಡು ವರ್ಷಗಳ ಕಾಲ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಿತು. ಇದೀಗ ಪುತ್ತಿಗೆಯ ವಿವೇಕಾನಂದ ನಗರದ ಶ್ರೀಮತಿ ಕೆ.ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗಮಂದಿರಲ್ಲಿ ಮೇಳೈಸುತ್ತಿದ್ದು, ಬಸದಿಯಿಂದ ಬಯಲು ರಂಗಮಂದಿರದವರೆಗೆ ಸಾಗಿದೆ.

ಪ್ರತಿ ವರ್ಷ ರಾಷ್ಟ್ರಮಟ್ಟದ ಕಲಾವಿದರೊಬ್ಬರಿಗೆ 'ಆಳ್ವಾಸ್ ವಿರಾಸತ್ " ಪ್ರಶಸ್ತಿಯನ್ನು ನೀಡಲು ಆರಂಭಿಸಿ ಇದೀಗ ಮೂರು ಜನ ಕಲಾವಿದರಿಗೆ ನೀಡುವಷ್ಟರ ಮಟ್ಟಿಗೆ ಬೆಳೆದು ಬಂದಿದೆ.



ಈ ಬಾರಿಯ ವಿರಾಸತನ್ನು  ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಿಸಲಾಗುತ್ತಿದ್ದು 

  ಇಂದು ಸಂಜೆ 5.30ಕ್ಕೆ ಆಳ್ವಾಸ್ ವಿರಾಸತ್ ಆರಂಭಗೊಳ್ಳಲಿದ್ದು ಕರ್ನಾಟಕ ಸರಕಾರದ ರಾಜ್ಯಪಾಲರಾದ ಡಾ. ಥಾವರ್ ಚಂದ್ ಗೆಹ್ಲೋಟ್ ಈ ಬಾರಿ 29ನೇ ವರ್ಷದ ವಿರಾಸತ್ ನ್ನು ಉದ್ಘಾಟಿಸಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ  ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್, ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಭಾರತ್ ಸ್ಕೌಟ್ ಗೈಡ್ಸ್ ನ ರಾಜ್ಯ ಅಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಚಿತ್ರಕಲಾ ಪರಿಷತ್ ನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್, ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಂಗಳೂರು ಎಂಆರ್ ಜಿ ಗ್ರೂಫ್ ನ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಅದಾನಿ ಗ್ರೂಪ್ ನ ಕಾರ್ಯನಿರ್ವಾಹಕ ಕಿಶೋರ್ ಆಳ್ವ, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ರಾಧ  ಸಹಿತ ಉದ್ಯಮಿಗಳು ಗೌರವ ಉಪಸ್ಥಿತರಿರುವರು.



ವಿವಿಧ ಕಲಾ ತಂಡಗಳಿಂದ ಮೆರವಣಿಗೆ : ಸಂಜೆ ೬.೩೫-ರಾತ್ರಿ ೮;೦೦ 

ಆಳ್ವಾಸ್ ವಿರಾಸತ್- ೨೦೨೩ 

ಭವ್ಯ ಸಾಂಸ್ಕೃತಿಕ ಮೆರವಣಿಗೆ 

೧೦೦ ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾತಂಡಗಳ ೩೦೦೦ಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ಭವ್ಯ ಸಾಂಸ್ಕೃತಿಕ ಮೆರವಣಿಗೆ. 



ವಿಶೇಷ ಆಕರ್ಷಣೆ : ರಾತ್ರಿ ೮.೦೫-೯;೦೦

ವೇದಘೋಷಗಳು, ಭಜನ್ ಗಳು, ಪುಷ್ಪಪಲ್ಲಕ್ಕಿಗಳು ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ ವಿನಾಯಕ, ಸರಸ್ವತಿ, ಶ್ರೀಲಕ್ಷ್ಮೀ, ಹನುಮಂತ, ಶ್ರೀರಾಮ ಶ್ರೀ ಕೃಷ್ಣಾದಿ ಆರೂಢ ದೇವರ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ವಿಶೇಷ ಆಕರ್ಷಣೆಯಾಗಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು

೧೫.೧೨.೨೦೨೩ ಶುಕ್ರವಾರ 

ಸಂಜೆ ೫.೪೫ :ದೀಪ ಪ್ರಜ್ವಲನ (ಸಭಾ ಕಾರ್ಯಕ್ರಮ ಇರುವುದಿಲ್ಲ)

೫.೫೫: ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ.

೬:೦೦-೮:೦೦: ಗಾನ ವೈಭವ

ಬೆನ್ನಿ ದಯಾಲ್, ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರು

ರಾತ್ರಿ ೮:೦೦-೯:೦೦ :ಆಳ್ವಾಸ್ ಸಾಂಸ್ಕೃತಿಕ ವೈಭವ


೧೬.೧೨.೨೦೨೩ ಶನಿವಾರ

ಸಂಜೆ ೫.೪೫: ದೀಪ ಪ್ರಜ್ವಲನ (ಸಭಾ ಕಾರ್ಯಕ್ರಮ ಇರುವುದಿಲ್ಲ)

೫.೫೫ : ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ

೬:೦೦-೮:೦೦ :ಭಾವ ಲಹರಿ

ಶ್ರೇಯಾ ಘೋಷಾಲ್, ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರು

ರಾತ್ರಿ :೮:೦೦-೯:೦೦ : ಆಳ್ವಾಸ್ ಸಾಂಸ್ಕೃತಿಕ ವೈಭವ


 ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ 

: ೧೭.೧೨.೨೦೨೩ ರವಿವಾರ

ಸಂಜೆ ೫:೧೫-೦೬:೧೫ :ಆಳ್ವಾಸ್ ವಿರಾಸತ್ -೨೦೨೩ ಪ್ರಶಸ್ತಿ ಪ್ರದಾನ ನಡೆಯಲಿದ್ದು 

ಕಲಾವಿದರಾದ  ಡಾ. ಮೈಸೂರು ಮಂಜುನಾಥ್, ಡಾ. ಪ್ರವೀಣ್ ಗೋಡ್ಖಿಂಡಿ,

ವಿಜಯ ಪ್ರಕಾಶ್ ಅವರಿಗೆ ಆಳ್ವಾಸ್ ವಿರಾಸತ್ -2023 ಪ್ರಶಸ್ತಿ ಪ್ರದಾನ ನಡೆಯಲಿದೆ.

೬.೩೦-೦೭.೧೫ :ತಾಳ-ವಾದ್ಯ-ಸಂಗೀತ ಕಾರ್ಯಕ್ರಮ 

ಡಾ. ಮೈಸೂರು ಮಂಜುನಾಥ್ 

ಡಾ. ಪ್ರವೀಣ್ ಗೋಡ್ಕಿಂಡಿ,  ವಿಜಯ ಪ್ರಕಾಶ್ ಮತ್ತು ಬಳಗ

ರಾತ್ರಿ ೭:೩೦-೯:೩೦ :ಸಂಗೀತ ರಸಸಂಜೆ

ಶ್ರೀ ವಿಜಯ ಪ್ರಕಾಶ್, ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರು

೯:೩೦-೧೦:೧೫ : ಆಳ್ವಾಸ್ ಸಾಂಸ್ಕೃತಿಕ ವೈಭವ


ಆಳ್ವಾಸ್ ವಿರಾಸತ್ ೨೦೨೩ರ ವಿಶೇಷ ಆಕರ್ಷಣೆ 

ಪೂರ್ವಾಹ್ನ ೦೯:೦೦ರಿಂದ ರಾತ್ರಿ ೧೦:೦೦ರ ವರೆಗೆ ೦೭ ಮೇಳಗಳ, ೭೫೦ಕ್ಕೂ ಮಿಕ್ಕಿದ ಮಳಿಗೆಗಳೊಂದಿಗೆ ಅನ್ವೇಷಣಾತ್ಮಕ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ 

ಪ್ರದರ್ಶನ ಮತ್ತು ಮಾರಾಟ ಮಹಾಮೇಳ

ಸ್ಥಳ: ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ ವೇದಿಕೆ) ಆವರಣ, ವಿದ್ಯಾಗಿರಿ, ಮೂಡುಬಿದಿರೆ



ಸಪ್ತಮೇಳಗಳ ಮೆರಗು : 

ಕೃಷಿ ಮೇಳ : ಹಣ್ಣು-ತರಕಾರಿ-ಹೂವಿನ ಬೀಜಗಳು, ನರ್ಸರಿಗಳು, ಸಾವಯವ-ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ವಿವಿಧ ಹೂಗಿಡಗಳು, ಕೃಷಿ ಉಪಕರಣ-ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು.


ಆಹಾರ ಮೇಳ: ಸಸ್ಯಾಹಾರ-ಮಾಂಸಾಹಾರಗಳ ವೈವಿಧ್ಯಮಯ ತಿನಿಸುಗಳ ಹಾಗೂ ವಿವಿಧ ಪಾನೀಯಗಳ ಸಿದ್ಧ ಮತ್ತು ಸ್ಥಳದಲ್ಲೇ ತಯಾರಿಸುವ ಆಹಾರ ಮಳಿಗೆಗಳು.



ಫಲಪುಷ್ಪ ಮೇಳ :ದೇಶ ವಿದೇಶಗಳ ೨ಲಕ್ಷಕ್ಕೂ ಮಿಕ್ಕಿದ ಫಲ-ಪುಷ್ಪ ಗಿಡಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು.


ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ : ವಸ್ತ್ರಗಳು, ಸಾಂಪ್ರದಾಯಿಕ ಆಭರಣಗಳು, ವಿವಿಧ ಕೆತ್ತನೆಯ ಮೂರ್ತಿಗಳು, ಆಟಿಕೆಗಳೇ ಮೊದಲಾದ ಕರಕುಶಲ ವಸ್ತುಗಳು ಹಾಗೂ ವೈವಿಧ್ಯಮಯ ಪ್ರಾಚ್ಯವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು.


ಚಿತ್ರಕಲಾ ಮೇಳ: ದೇಶದ ಖ್ಯಾತ ಚಿತ್ರಕಲಾವಿದರ ಪ್ರಸಿದ್ಧ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ.


ಕಲಾಕೃತಿಗಳ ಪ್ರದರ್ಶನ :  ಆವರಣದ ತುಂಬಾ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುವ ವಿಶೇಷ ಕಲಾಕೃತಿಗಳ ಬೃಹತ್ ಪ್ರದರ್ಶನ.



ಛಾಯಾಚಿತ್ರಗಳ ಪ್ರದರ್ಶನ : ವಿಶ್ವಮಾನ್ಯ ಪರಿಸರ ಮತ್ತು ವನ್ಯಜೀವಿಗಳ ೨೦೦೦ಕ್ಕೂ ಮಿಕ್ಕಿದ ಛಾಯಾಚಿತ್ರಗಳ ಪ್ರದರ್ಶನ. ಹೀಗೆ ಒಟ್ಟು ಸಪ್ತ ಮೇಳಗಳು ಈ ಬಾರಿಯ ವಿರಾಸತ್ ಗೆ ಮೆರಗು ನೀಡಲಿವೆ.


 ಕಾರ್ಯಕ್ರಮಗಳು ಆರಂಭಗೊಳ್ಳುವ ೧೫ ನಿಮಿಷಗಳ ಮೊದಲು ಆಸನ ಸ್ವೀಕರಿಸಿ.


. ಮೂಡುಬಿದಿರೆಯ ಪ್ರಕೃತಿರಮಣೀಯ ಪ್ರಶಾಂತ ವಾತಾವರಣದ ವಿಶಾಲ ಬಯಲು ರಂಗಮಂದಿರದಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು.


. ೪೦ ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ.


. ಕಣ್ಮನ ಸೆಳೆಯುವ ದೀಪಾಲಂಕಾರದ ವೈಭವ.



. ವಾಹನ ನಿಲುಗಡೆಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ.


. ಮಕ್ಕಳಾದಿಯಾಗಿ ವಿದ್ಯಾರ್ಥಿಗಳು, ಯುವ ಸಮುದಾಯ, ವಯೋವೃದ್ಧರವರೆಗೆ ಗಂಡು-ಹೆಣ್ಣೆಂಬ ಭೇದವಿಲ್ಲದೆ ಕುಟುಂಬ ಸಮೇತ ನೋಡಲೇಬೇಕಾದ ಅಪೂರ್ವ ಸಾಂಸ್ಕೃತಿಕ ಉತ್ಸವ.

ನಿಮ್ಮ ಆಗಮನದ ನಿರೀಕ್ಷೆಯಲ್ಲಿ 

ಆಧ್ಯಕ್ಷರು ವಿಶ್ವಸ್ತ ಮಂಡಳಿ ಸದಸ್ಯರು ಆಡಳಿತ ಮಂಡಳಿ ಸದಸ್ಯರು, ಅಧಿಕಾರಿ ವರ್ಗ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವೃಂದ

ಉಚಿತ ಪ್ರವೇಶ.

 ಈ ಬಾರಿಯ ವಿರಾಸತ್ ನಲ್ಲಿರುವ ಮುಖ್ಯಾಂಶಗಳು: 

• ಡಿಸೆಂಬರ್ 14ರಿಂದ 17ರ ವರೆಗೆ ಆಳ್ವಾಸ್ ವಿರಾಸತ್ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ‘ಸಪ್ತ ಮೇಳ’ಗಳು ಈ ಬಾರಿಯ ವೈಶಿಷ್ಟ್ಯ


• ಎಲ್ಲರಿಗೂ ವಿರಾಸತ್‌ಗೆ ಉಚಿತ ಪ್ರವೇಶವಿದ್ದು, 40 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 

• ಈ ಬಾರಿಯ ವಿರಾಸತ್ ಅನ್ನು ದೇಶಕ್ಕಾಗಿ ದೇಹತ್ಯಾಗಿ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ. 

• ಬೆನ್ನಿ ದಯಾಲ್, ವಿಜಯಪ್ರಕಾಶ್, ಶ್ರೇಯಾ ಘೋಷಾಲ್ ಸ್ವರ ಮಾಧುರ್ಯ 

• ಡಾ. ಮೈಸೂರು ಮಂಜುನಾಥ್, ಡಾ. ಪ್ರವೀಣ್ ಗೋಡ್ಖಿಂಡಿ ನಾದ- ನಿನಾದ 

• ಪ್ರತಿನಿತ್ಯ 13 ಗಂಟೆಗಳ ಕಾಲ 750 ಮಳಿಗೆಗಳಲ್ಲಿ ಪ್ರದರ್ಶನ ಹಾಗೂ ಮಾರಾಟಗಳಿದ್ದು, ಪಂಚೇಂದ್ರಿಯಗಳಿಗೆ ರಸದೌತಣ 

• ಭವ್ಯ ಸಾಂಸ್ಕೃತಿಕ ಮೆರವಣಿಗೆ ಬಳಿಕ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ

• ಕೃಷಿ ಮೇಳ: ಹಣ್ಣು, ತರಕಾರಿ, ಹೂವು ಸೇರಿದಂತೆ ನೆಲ-ಜಲದಲ್ಲಿ ಬೆಳೆಯುವ ಸಸ್ಯ ಹಾಗೂ ಅವುಗಳ ಉತ್ಪನ್ನಗಳು ಹಾಗೂ ಕೃಷಿ ಉಪಕರಣ-ಯಂತ್ರಗಳ ಪ್ರದರ್ಶನ ಮಾರಾಟ. 

• ಆಹಾರ ಮೇಳ: ಸಸ್ಯಾಹಾರಿ ಹಾಗೂ ಮಾಂಸಾಹಾರಿಯ ವೈವಿಧ್ಯಮಯ ತಿನಿಸುಗಳು. ವಿವಿಧ ಪಾರಂಪರಿಕ ಆಹಾರ ಹಾಗೂ ಆಧುನಿಕ ಫಾಸ್ಟ್ಫುಡ್ ತಿನಿಸುಗಳು.

• ಫಲಪುಷ್ಪ ಮೇಳ: 2 ಲಕ್ಷಕ್ಕೂ ಅಧಿಕ ತರಹೇವಾರಿಯ ಫಲ, ಪುಷ್ಪ, ತರಕಾರಿಗಳ ಪ್ರದರ್ಶನ ಮೇಳದಲ್ಲಿ ಇರಲಿದೆ. ದೇಶ-ವಿದೇಶಗಳಿಂದ ತಂದ ತಳಿಗಳು, ನಮ್ಮದೇ ಮಣ್ಣಿನ ದೇಸೀಯ ತಳಿಗಳು, ಕಸಿ ಮಾಡಿದ ವೈವಿಧ್ಯ ಫಲಗಳು ಇರಲಿವೆ. ಹಣ್ಣು- ಹೂವುಗಳಿಂದ ಮಾಡಿದ ಕಲಾಕೃತಿಗಳೂ ಇರಲಿವೆ. 

• ಕುರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ: ಸಾಂಪ್ರದಾಯಿಕ ಉಡುಗೆ-ತೊಡುಗೆಗಳು, ಆಭರಣಗಳು, ಮೂರ್ತಿಗಳು, ಆಟಿಕೆಗಳು ಸೇರಿದಂತೆ ಕರಕುಶಲ ಮತ್ತು ಪ್ರಾಚ್ಯವಸ್ತುಗಳ ಸುಮಾರು 100ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. 

• ಚಿತ್ರಕಲಾ ಮೇಳ: ದೇಶ-ವಿದೇಶದ ಖ್ಯಾತ ಕಲಾವಿದರಿಂದ ಚಿತ್ರಕಲಾ ಪ್ರದರ್ಶನ

• ಕಲಾಕೃತಿಗಳ ಪ್ರದರ್ಶನ: ವಿಭಿನ್ನ ಕಲಾಪ್ರಕಾರಗಳ ಮೂಲಕ ರಚಿಸಿದ ವಿವಿಧ ಕಲಾಕೃತಿಗಳ ಪ್ರದರ್ಶನವು ವಿರಾಸತ್ ನಡೆಯುವ ಆವರಣದಾದ್ಯಂತ ಇರಲಿದೆ. 

• ಸ್ಕೌಟ್-ಗೈಡ್ಸ್ ಸಾಹಸಮಯ ಚಟುವಟಿಕೆ ಕೇಂದ್ರ: ಮಕ್ಕಳಿಗೆ ಮನೋಲ್ಲಾಸ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಗೆ ವಿವಿಧ ಸಾಹಸಮ ಚಟುವಟಿಕೆಗಳ ಕೇಂದ್ರವನ್ನು ಸುಮಾರು 2 ಎಕರೆಯಲ್ಲಿ ಸ್ಥಾಪಿಸಲಾಗಿದೆ

Post a Comment

0 Comments