ರಾಜ್ಯಾಧ್ಯಕ್ಷ ಪದವಿ ಹಸ್ತಾಂತರ ಬೆನ್ನಲ್ಲೇ ಆಡಳಿತಕ್ಕೆ ಚುರುಕು ನೀಡಿದ ಸಂಸದ ಕಟೀಲು:

ಜಾಹೀರಾತು/Advertisment
ಜಾಹೀರಾತು/Advertisment

 ರಾಜ್ಯಾಧ್ಯಕ್ಷ ಪದವಿ ಹಸ್ತಾಂತರ ಬೆನ್ನಲ್ಲೇ ಆಡಳಿತಕ್ಕೆ ಚುರುಕು ನೀಡಿದ ಸಂಸದ ಕಟೀಲು: ಪುತ್ತೂರಿನಲ್ಲಿ ಬಹು ಬೇಡಿಕೆಯ ಕಾಮಗಾರಿಗೆ ಶಂಕುಸ್ಥಾಪನೆ



ಸುಧೀರ್ಘ ಅವಧಿಗೆ ರಾಜ್ಯಾಧ್ಯಕ್ಷ ಪದವಿ ಅಲಂಕರಿಸಿದ ಕೀರ್ತಿ ವೆತ್ತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ತನ್ನ ಅಧ್ಯಕ್ಷ ಪದವಿ ಹಸ್ತಾಂತರದ ಮರುದಿನವೇ ತನ್ನ ಕ್ಷೇತ್ರದ ಆಡಳಿತಕ್ಕೆ ಚುರುಕು ನೀಡಲು ಮುಂದಾಗಿದ್ದಾರೆ.


ಪ್ರತಿ ದಿನ ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲು ನಿರ್ಧರಿಸಿದ ಸಂಸದರು ಮೊದಲ ದಿನವೇ ಪುತ್ತೂರು ವಿಧಾನಸಭಾ ಕ್ಷೇತ್ರದ ಭೇಟಿ ಕೈಗೊಂಡಿದ್ದಾರೆ. 



ಪುತ್ತೂರಿನಲ್ಲಿ ಬಹು ಬೇಡಿಕೆಯಾದ ವಿವೇಕಾನಂದ ಕಾಲೇಜು ಬಳಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಇಲ್ಲಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹು ಕಾಲದ ಬೇಡಿಕೆಯಾಗಿದ್ದ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ 5 ಕೋಟಿ ರೂಪಾಯಿ ಮೊತ್ತ ಮೀಸಲಿರಿಸಿದ್ದು ಇಂದು ಅದರ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

Post a Comment

0 Comments