ನೆಲ್ಲಿಕಾರು ಗ್ರಾಮ ಪಂಚಾಯತ್, ಭ್ರಾಮರಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ( ರಿ ) ವಾರ್ಷಿಕ ಮಹಾಸಭೆ
ಮೂಡುಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯತ್, ಭ್ರಾಮರಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ( ರಿ ), ಇದರ ವಾರ್ಷಿಕ ಮಹಾಸಭೆಯು ಬುಧವಾರ ನೆಲ್ಲಿಕಾರ್ ಹಳೆ ಪಂಚಾಯತ್ ಕಟ್ಟಡದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷೆ ವಸಂತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷ ಉದಯ ಪೂಜಾರಿ ಅವರು ಉದ್ಘಾಟಿಸಿದರು. ನೆಲ್ಲಿಕಾರು ಅರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಭರತ್ ಮಹಿಳೆಯರ, ಗರ್ಭಿಣಿಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಅಂಗನವಾಡಿ ಮೇಲ್ವಿಚಾರಕಿ ಶುಭ ಅವರು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮಾಹಿತಿ ನೀಡಿದರು.
ದುರ್ಬಲ ವರ್ಗದ ನಿಧಿಯಿಂದ ವಿಕಲಚೇತನರಿಗೆ ಮತ್ತು ಬಡ ಕುಟುಂಬಕ್ಕೆ ತಲಾ 3000/= ದಂತೆ ಉಚಿತವಾಗಿ ನೀಡಲಾಯಿತು.
ಆಶಾ ಕಾರ್ಯ ಕರ್ತೆ ಪದ್ಮಲತಾ ಇವರು ಬಡ ಕುಟುಂಬಕ್ಕೆ 2000/= ಸಹಾಯ ಧನವನ್ನು ನೀಡಿದರು.
ಎನ್ ಆರ್ ಎಲ್ ಎಂ ತಾಲೂಕು ವ್ಯವಸ್ಥಾಪಕರಾದ ಸುಬ್ರಮಣ್ಯ ಸರ್ ಪ್ರಸ್ತಾವನೆ ಗೈದು, ಒಕ್ಕೂಟದ ನೂತನ ಸಮಿತಿ ರಚನೆ ಮಾಡಿದರು. ಒಕ್ಕೂಟದಲ್ಲಿ ಈ ವರೆಗೆ ಕಾರ್ಯ ನಿರ್ವಹಿಸಿದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಶೀಲ, ಸದಸ್ಯರಾದ ಜಿನೇಂದ್ರ ಜೈನ್, ಜಯಂತ ಹೆಗ್ಡೆ, ಶಶಿಧರ ಎಂ, ಆಶಾಲತ, ಸುನಂದ, ಪಂಚಾಯತ್ ಕಾರ್ಯದರ್ಶಿ ದಾಮೋದರ ಇವರು ಉಪಸ್ಥಿತರಿದ್ದರು.
ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸಂಜೀವಿನಿ ಸದಸ್ಯರು ಭಾಗಗಳಾಗಿದ್ದರು.ಮಹಿಳೆಯರಿಗಾಗಿ ಲಕ್ಕಿ ಗೇಮ್ ಆಯೋಜಿಸಲಾಗಿತ
ತ್ತು. ಎಂ.ಬಿ.ಕೆ ಗೀತಾ ಜೈನ್ ಸ್ವಾಗತಿಸಿ, ವಾರ್ಷಿಕ ವರದಿಯನ್ನು ಮಂಡಿಸಿದರು.
ಎಲ್ ಸಿ ಆರ್ ಪಿ ಸುಮಲತಾ ಲೆಕ್ಕ ಪತ್ರ ಮಂಡಿಸಿದರು. ಪಂಚಾಯತ್ ನ ಸಿಬಂದಿ ಪ್ರಶಾಂತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
0 Comments