ಕದ್ರಿ ಕ್ರಿಕೆಟರ್ಸ್ ನಿಂದ ರಿತ್ ಮಿಕ್ ನೈಟ್ : ಶ್ರೀನಿವಾಸ ಗೌಡ ಸಹಿತ ಮೂವರಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 ಕದ್ರಿ ಕ್ರಿಕೆಟರ್ಸ್ ನಿಂದ ರಿತ್ ಮಿಕ್ ನೈಟ್ : ಶ್ರೀನಿವಾಸ ಗೌಡ ಸಹಿತ ಮೂವರಿಗೆ ಸನ್ಮಾನ



ಮೂಡುಬಿದಿರೆ: ಕದ್ರಿ ಕ್ರಿಕೆಟರ್ಸ್ ಕ್ಲಬ್ (ರಿ) ಮತ್ತು  ಆಸರೆ ಫ್ರೆಂಡ್ಸ್ ಕದ್ರಿ ಇದರ ದಶಮಾನೋತ್ಸವದಂಗವಾಗಿ ದೀಪಾವಳಿ ಆಚರಣೆ 'ರಿತ್ ಮಿಕ್ ನೈಟ್' ಕಾರ್ಯಕ್ರಮವು ಮಂಗಳವಾರ ರಾತ್ರಿ ಕದ್ರಿ ಗ್ರೌಂಡ್ ನಲ್ಲಿ ನಡೆಯಿತು.

  ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಿಶಲ್ ಕ್ವೀನಿ ಡಿ'ಕೋಸ್ತ( ನಾಗರಿಕ ಸೇವೆ), ಈಶ್ವರ್ ಮಲ್ಪೆ( ಸಮಾಜ ಸೇವಕ) ಹಾಗೂ ಕಂಬಳ ಕ್ರೀಡೆಯಲ್ಲಿ ಸಾಧನೆ ಮಾಡಿರುವ  ರಾಜ್ಯ 'ಕ್ರೀಡಾರತ್ನ' ಪುರಸ್ಕೃತ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಲಾಯಿತು.

  ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್, ಕದ್ರಿ ಕ್ರಿಕೆಟರ್ಸ್, ಚಿತ್ರನಟರಾದ ಅರ್ಜುನ್ ಕಾಪಿಕಾಡ್, ಅನೂಪ್ ಸಾಗರ್, ಲಕುಮಿ ತಂಡದ ಕಿಶೋರ್ ಡಿ.ಶೆಟ್ಟಿ, ಕದ್ರಿ ಕ್ರಿಕೆಟರ್ಸ್, ಆಸರೆ ಪ್ರೆಂಢ್ಸ್ ನ ದೀಪಕ್ ಸಾಲ್ಯಾನ್ ಮತ್ತು ದಿನೇಶ್, ಕಾರ್ಯಕ್ರಮ ನಿರೂಪಕರಾದ ವಿಜಿ ಮಧುರಾಜ್ ಹಾಗೂ ಸೌಜನ್ಯ ಈ ಸಂದರ್ಭದಲ್ಲಿದ್ದರು.

Post a Comment

0 Comments