ಪ್ರೇರಣಾ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ಕೊಠಡಿ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಪ್ರೇರಣಾ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ಕೊಠಡಿ ಉದ್ಘಾಟನೆ



ಮೂಡುಬಿದಿರೆ: ಸೇವಾಂಜಲಿ ಎಜ್ಯುಕೇಶನಲ್ ಟ್ರಸ್ಟ್(ರಿ), ವಿದ್ಯಾ ಭಾರತಿ ಸಂಯೋಜಿತ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಡಲಕೆರೆ ಮೂಡುಬಿದಿರೆ ಇಲ್ಲಿ ಬೆಳುವಾಯಿ ಹಡಿಂಜೆಗುತ್ತು ಶ್ರೀ ಲಕ್ಷ್ಮಣ್ ಡಿ'ಶೆಟ್ಟಿ ಸ್ಮರಣಾರ್ಥ ನಿರ್ಮಿಸಿರುವ ಶಾಲಾ ಕೊಠಡಿಯ ಉದ್ಘಾಟನೆ ಬುಧವಾರ ನಡೆಯಿತು.


 ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ ಒಂದು ಸಾಧನೆಯ ಬದುಕನ್ನು ಕಟ್ಟಿದರೆ ಅದು ನಮ್ಮ ಬದುಕಿನ ನಂತರವೂ ಕೂಡಾ ನೆನಪಾಗಿ ಉಳಿಯುವಂತ್ತಾಗಬೇಕು ಆ ಕೆಲಸವನ್ನು ಲಕ್ಷ್ಮಣ್ ಅವರ ಪುತ್ರರು ಮಾಡಿದ್ದಾರೆ.


   ಸಂಸ್ಥೆಯಲ್ಲಿ ವಿಶಾಲ ದೃಷ್ಠಿಯಿಂದ ಶಿಕ್ಷಣವನ್ನು ನೀಡುತ್ತಿದ್ದು  ಭಾರತೀಯ ಸಂಸ್ಕೃತಿ ಉಳಿಸಬೇಕು, ಜೀವನ ಮೌಲ್ಯಗಳು ಉಳಿಯಬೇಕು ಹಾಗೂ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಬೇಕೆಂಬ ಉದ್ದೇಶವನ್ನು ಹೊಂದಿದೆ. ಅಲ್ಲದೆ ಶಿಕ್ಷಣದ ಜತೆ ಸಮಾಜಮುಖಿಯಾಗಿ ಯೋಚನೆ ಮಾಡುವಂತಹ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬದುಕನ್ನು ಕಟ್ಟಿಕೊಳ್ಳುವಂತಹ ಹಾಗೂ ಈ ದೇಶವನ್ನು ಮುಂದಿನ‌ ಭವಿಷ್ಯದಲ್ಲಿ ಸಶಕ್ತವಾಗಿ ಉಳಿಸಿ ಸಾಧಕರಾಗಬೇಕೆನ್ನುವ ಉದ್ದೇಶವನ್ನಿಟ್ಟುಕೊಂಡು ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.

ಶಾಲಾ ಸಂಚಾಲಕ ಪ್ರೊ.ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು.

ಬೆಳುವಾಯಿ ಹಡಿಂಜೆ ಲಕ್ಷ್ಮಣ್ ಡಿ.ಶೆಟ್ಟಿ ಅವರ ಪುತ್ರ ಅಸೆಟ್ಜ್ ಪ್ರಾಪರ್ಟಿ ಗ್ರೂಪ್ ನ ನಿರ್ದೇಶಕ ಜಗನ್ನಾಥ ಎಲ್.ಶೆಟ್ಟಿ, ಇನ್ನೋರ್ವ ಪುತ್ರ ಅಮರನಾಥ ಎಲ್.ಶೆಟ್ಟಿ,ಜಿ.ಪಂ.ನ ಮಾಜಿ ಸದಸ್ಯ ದಿನಕರ ಬಿ.ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

  ಶಾಲಾ ಕೊಠಡಿ ನಿರ್ಮಾಣಕ್ಕೆ ಸಹಕರಿಸಿರುವ ದಾನಿಗಳನ್ನು ಗೌರವಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕಿ ವತ್ಸಲಾ ಉಪಸ್ಥಿತರಿದ್ದರು.


  ಸೇವಾಂಜಲಿ‌ ಎಜ್ಯುಕೇಶನ್‌ ಟ್ರಸ್ಟ್ (ರಿ)ನ ಅಧ್ಯಕ್ಷ ರಾಜೇಶ್ ಬಂಗೇರಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಗೆ ಆವರಣಗೋಡೆ ಹಾಗೂ ಕ್ರೀಡಾಂಗಣದ ಅವಶ್ಯಕತೆಯಿದೆ. ಶಾಲೆಗೆ ಪ್ರತಿ ತಿಂಗಳು 1,60,000ದಷ್ಟು ಖರ್ಚು ಇದ್ದು ಅನೇಕ ದಾನಿಗಳು ಸಹಕಾರ ನೀಡಿ ಮುನ್ನಡೆಸುತ್ತಿದ್ದಾರೆ. ಮುಂದೆಯೇ  ಸಹಕಾರ ನೀಡುವಂತೆ ಕೋರಿದರು. ಟ್ರಸ್ಟಿಗಳಾದ ಶಾಂತರಾಮ ಕುಡ್ವ ಕಾರ್ಯಕ್ರಮ ನಿರೂಪಿಸಿದರು. ಎಸ್.ಎನ್.ಬೋರ್ಕರ್ ವಂದಿಸಿದರು.

Post a Comment

0 Comments