ಮೂಡುಬಿದಿರೆ: ಶಾಲಾ ನೂತನ ಕೊಠಡಿಗಳಿಗೆ ಶಿಲಾನ್ಯಾಸ
ಮೂಡುಬಿದಿರೆ: ವಿವೇಕ ಶಾಲಾ ಯೋಜನೆಯಡಿಯಲ್ಲಿ ರೂ 28ಲಕ್ಷದಲ್ಲಿ ಮೈನ್ ಶಾಲೆಯಲ್ಲಿ ನಿರ್ಮಾಣವಾಗಲಿರುವ 2 ಕೊಠಡಿಗಳಿಗೆ ಸೋಮವಾರ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸಗೈದರು.
ಚೌಟರ ಅರಮನೆಯ ಕುಲದೀಪ ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಪುರಸಭಾ ಸದಸ್ಯರಾದ ಶಕುಂತಳಾ ದೇವಾಡಿಗ, ಸ್ವಾತಿ ಎಸ್. ಪ್ರಭು, ರಾಜೇಶ್ ನಾಯ್ಕ್, ನಾಗರಾಜ ಪೂಜಾರಿ, ನವೀನ್ ಶೆಟ್ಟಿ, ಸುಜಾತ, ದಿವ್ಯಾ ಜಗದೀಶ್, ಜಯಶ್ರೀ,ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ವಿಶೇಷ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಂ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಟಿ.ರಘುವೀರ್ ಶೆಣೈ, ಲಕ್ಷಣ ಪೂಜಾರಿ, ಎಸ್ ಡಿ ಎಂಸಿ ಅಧ್ಯಕ್ಷೆ ಚಂಚಲಾಕ್ಷಿ, ಉಪಾಧ್ಯಕ್ಷ ಮಹಮ್ಮದ್ ಹನೀಫ್, ಮಾಜಿ ಅಧ್ಯಕ್ಷ ಸುಧೀಶ್ ಕುಮಾರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಎಸ್., ಸಿಆರ್ ಪಿ ನಾಗರತ್ನ ಶಿರೂರು, ಮುಖ್ಯ ಶಿಕ್ಷಕಿ ಶಶಿಕಲಾ, ಶಿಕ್ಷಕ ವೃಂದದವರು, ಅಡುಗೆ ಸಿಬಂದಿಗಳು, ಪೋಷಕರು, ದಾನಿಗಳು ಈ ಸಂದರ್ಭದಲ್ಲಿದ್ದರು.
ವೇ.ಮೂ.ಹರೀಶ್ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
0 Comments