ರಾಜ್ಯ ವೇಯ್ಟ್ ಲಿಫ್ಟಿಂಗ್ : ಆಳ್ವಾಸ್ ಗೆ ಸಮಗ್ರ ಪ್ರಶಸ್ತಿ

ಜಾಹೀರಾತು/Advertisment
ಜಾಹೀರಾತು/Advertisment

 ರಾಜ್ಯ ವೇಯ್ಟ್ ಲಿಫ್ಟಿಂಗ್ : ಆಳ್ವಾಸ್ ಗೆ ಸಮಗ್ರ ಪ್ರಶಸ್ತಿ



ಮೂಡುಬಿದಿರೆ: ಈಚೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಟ್ಟದ ಯೂತ್, ಜೂನಿಯರ್ ಮತ್ತು ಸೀನಿಯರ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ ಷಿಪ್‌ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಆರು ವಿಭಾಗದಲ್ಲಿ ತಂಡ ಪ್ರಶಸ್ತಿ ಜತೆಗೆ ಸಮಗ್ರ ತಂಡ ಪ್ರಶಸ್ತಿಯನ್ನು ಆಳ್ವಾಸ್ ಪಡೆದುಕೊಂಡಿತು.


ಪುರುಷರ ವಿಭಾಗದ ಯೂತ್, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಹಾಗೂ ಮಹಿಳಾ ವಿಭಾಗದ ಯೂತ್, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ತಂಡ ಪ್ರಶಸ್ತಿ ಪಡೆದಿದೆ. ಪುರುಷರ ವಿಭಾಗದ ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ಜೂನಿಯರ್ ವಿಭಾಗದಲ್ಲಿ ಆಳ್ವಾಸ್‌ನ ಶಿವಾನಂದ ಪಡೆದುಕೊಂಡರು.


ಮಹಿಳಾ ವಿಭಾಗದ ಬೆಸ್ಟ್ ಲಿಫ್ಟರ್  ಪ್ರಶಸ್ತಿಯನ್ನು ಯೂತ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು  ಪಡೆದುಕೊಂಡಿದ್ದು, ಕ್ರೀಡಾಪಟುಗಳ ಉತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.

Post a Comment

0 Comments