*ವೈಜ್ಞಾನಿಕವಾದ ಅನೇಕ ವಿಷಯಗಳು ನಮ್ಮಪರಂಪರೆಯಲ್ಲಿ ಹಾಸುಹೊಕ್ಕಾಗಿವೆ- ಕ್ಯಾ! ಗಣೇಶ್ ಕಾರ್ಣಿಕ್*
ಜವನೇರ್ ಬೆದ್ರ ಫೌಂಡೇಷನ್(ರಿ), ಮೂಡುಬಿದ್ರೆ ಇವರು ಆಯೋಜಿಸಿದ " ದೀಪಾವಳಿ ಸಂಭ್ರಮ" ಕಾರ್ಯಕ್ರಮವು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನೆರವೇರಿತು.
ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಯೋಧರನ್ನು ಗುರುತಿಸಿ, ಗೌರವಿಸುವ ಔಚಿತ್ಯಪೂರ್ಣ ಕಾರ್ಯಕ್ರಮ 'ಯೋಧ ನಮನ' ದ ಅಂಗವಾಗಿ ಭಾರತೀಯ ಸೇನೆಯ ಪಂಜಾಬ್ ವಿಭಾಗದಲ್ಲಿ ಹವಾಲ್ದಾರರಾಗಿ ಸೇವೆ ಸಲ್ಲಿಸುತ್ತಿರುವ ತಿಲಕ್ ಎಸ್ ಪಿ- ಇವರಿಗೆ ಗೌರವ ಪ್ರದಾನ ಮಾಡಲಾಯಿತು. ಇವರ ಪರವಾಗಿ ಇವರ ತಾಯಿ ಸನ್ಮಾನ ಸ್ವೀಕರಿಸಿದರು.
ದೀಪ ಪ್ರಜ್ವಲನೆ ಮಾಡಿದ ಮಾಜಿ ಶಾಸಕ ಕ್ಯಾ! ಗಣೇಶ್ ಕಾರ್ಣಿಕ್ ಮಾತನಾಡಿ ನಮ್ಮ ಹೃದಯ ಎಂಬ ಗೂಡಿನ ದೀಪವು ಪ್ರಜ್ವಲಿಸಬೇಕಾದರೆ ಪಾರಂಪರಿಕವಾಗಿ ನಮ್ಮ ಪದ್ಧತಿಯಲ್ಲಿ ಇರುವ ಅನೇಕ ಆಚರಣೆಗಳು ಕಾರ್ಯರೂಪಕ್ಕೆ ಬರಬೇಕು ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಶ್ರೀ ವೆಂಕಟ್ರಮಣ ಭಟ್ ಕೆರೆಗದ್ದೆ ಮಾತನಾಡಿ ಇಂದಿನ ಪೀಳಿಗೆಗೆ ಧರ್ಮಶಿಕ್ಷಣದ ಅವಶ್ಯಕತೆಯನ್ನು ವಿವರಿಸಿ, ದೇವಸ್ಥಾನದಲ್ಲಿ ಶೀಘ್ರದಲ್ಲಿ ಭಗವದ್ಗೀತೆ ಪ್ರವಚನ ಹಮ್ಮಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಕೆ ಪಿ ಸುಚರಿತ ಶೆಟ್ಟಿ, ಡಾ! ಅಮರಶ್ರೀ ಶೆಟ್ಟಿ, ಶ್ರೀ ಶಾಂತಾರಾಮ ಕುಡ್ವ ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗುರುಪ್ರಸಾದ್ ಹೊಳ್ಳ ವಹಿಸಿದ್ದರು.
ಯುವವಾಹಿನಿ(ರಿ) ಮೂಡುಬಿದ್ರೆ ಘಟಕದ ಅಧ್ಯಕ್ಷ ಸುಶಾಂತ್ ಕರ್ಕೇರ, ಸರ್ವೋದಯ ಫ್ರೆಂಡ್ಸ್ ನ ಗುರುಪ್ರಸಾದ್, ರಾಜೇಶ್ ಕೋಟೆಗಾರ್ ಹಾಗೂ ಪವರ್ ಫ್ರೆಂಡ್ಸ್ ನ ವಿನಯ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ 2023-24ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನೆರವೇರಿತು. ಹಾಗೂ ಗೂಡುದೀಪ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜವನೆರ್ ಬೆದ್ರ ಫೌಂಡೇಷನ್(ರಿ)ನ ಸ್ಥಾಪಕ ಅಮರ್ ಕೋಟೆ ಅತಿಥಿಗಳಿಗೆ ಸ್ವಾಗತ ಕೋರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಚಾಲಕ ನಾರಾಯಣ್ ಪಡುಮಲೆ ಧನ್ಯವಾದ ಸಮರ್ಪಿಸಿದರು. ಸಂದೀಪ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು"ಭಕ್ತಿಗಾನ ಸಿಂಚನ"ದಲ್ಲಿ ಇಂದಿರೇಶ್ ಪಾಂಡುರಂಗಿ ಶಿಕಾರಿಪುರ ಹಾಗೂ ತಂಡದವರು ಸುಮಾರು 1.30 ತಾಸುಗಳ ಕಾಲ ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿರಿಸಿದರು.ಭಕ್ತಾದಿಗಳು ಹಣತೆಯಲ್ಲಿ ದೀಪ ಹಚ್ಚಿ ದೇಗುಲದ ಆವರಣ ಹಾಗೂ ಪುಷ್ಕರಿಣಿಯಲ್ಲಿ ದೀಪೋತ್ಸವವನ್ನು ಆಚರಿಸಿದರು. ಸಮಾರೋಪದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನವು ನೆರವೇರಿತು.
.
0 Comments