ಜಿಲ್ಲಾ ಮಟ್ಟದ ಬಾಲಕರ ಹಾಗೂ ಬಾಲಕಿಯರ ಹಾಕಿ ಪಂದ್ಯಾಟದಲ್ಲಿ ಜೈನ ಪದವಿಪೂರ್ವ ಕಾಲೇಜಿಗೆ ಪ್ರಥಮ ಸ್ಥಾನ
ಮೂಡುಬಿದಿರೆ: ಪದವಿಪೂರ್ವ ವಿಭಾಗದ ಜಿಲ್ಲಾ ಮಟ್ಟದ ಹುಡುಗರ ಮತ್ತು ಹುಡುಗಿಯರ ಹಾಕಿ ಪಂದ್ಯಾಟ ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಬುಧವಾರ ನೆರವೇರಿತು.
ಸತತ ಮೂರನೆಯ ಬಾರಿ ಜೈನ ಪದವಿಪೂರ್ವ ಕಾಲೇಜಿಗೆ ಹುಡುಗರ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಹುಡುಗಿಯರ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸೈಂಟ್ ಅಲೋಶಿಯಸ್ ಕಾಲೇಜ್ ಮಂಗಳೂರು ದ್ವಿತೀಯ ಸ್ಥಾನ ಹಾಗೂ ಹುಡುಗರ ವಿಭಾಗದ ದ್ವಿತೀಯ ಸ್ಥಾನವನ್ನು ರೋಟರಿ ಪಿಯು ಕಾಲೇಜು ಮೂಡಬಿದರೆ ಇವರು ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭದಲ್ಲಿ
ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಅಭಿಜಿತ್ ಎಂ, ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡು
ದೈಹಿಕ ಶಿಕ್ಷಣ ಉಪನ್ಯಾಸಕರಾದ ನವೀನ್ ಎಂ ಹೆಗಡೆ ಉದ್ಯಮಿ ರವಿರಾಜ್, ರೋಟರಿ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್,
ದೈಹಿಕ ಶಿಕ್ಷಣ ಉಪನ್ಯಾಸಕ ಶಾನ್.
ಕಚೇರಿ ಅಧೀಕ್ಷಕ ಜಯಪ್ರಭ .ತರಬೇತುದಾರರಾದ ಮಹಮ್ಮದ್ ಹ್ಯಾರಿಸ್, ಸುಪ್ರೀತ್ ಮೊದಲಾದವರು ಉಪಸ್ಥಿತರಿದ್ದರು
0 Comments