ಶ್ರೀ ಧವಲಾ ಕಾಲೇಜಿನಲ್ಲಿ ಕುರುಕ್ಷೇತ್ರ 2023 - ಅಂತರ್ ಕಾಲೇಜು ಸ್ಪರ್ಧೆ
ಶ್ರೀ ಧವಲಾ ಕಾಲೇಜು, ಮೂಡಬಿದಿರೆ, ವಾಣಿಜ್ಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಅಂತರ್ ಕಾಲೇಜು ಪದವಿ ಪೂರ್ವ ವಿಭಾಗದ ಸ್ಪರ್ಧೆ "ಕುರುಕ್ಷೇತ್ರ 2023" ದಿನಾಂಕ 24.11.2023 ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ. ಡಿ. ಜೆ. ವಿ. ಸಂಘದ ಕಾರ್ಯದರ್ಶಿಯವರಾದ ಶ್ರೀ ಅಭಿಜಿತ್ ಎಂ ಭಾಗವಹಿಸಿದ್ದರು. ಶ್ರೀ ಗೋಕರ್ಣನಾಥ ಕಾಲೇಜು, ಮಂಗಳೂರು ಇದರ ಶೈಕ್ಷಣಿಕ ವಿಭಾಗದ ಮಾಜಿ ಡೀನ್ ಆಗಿ ಸೇವೆ ಸಲ್ಲಿಸಿದ್ದ ಡಾ. ಉಮ್ಮಪ್ಪ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ ಶ್ರೀ ಪ್ರಶಾಂತ್ ಎಂ ಕೋಟ್ಯಾನ್ ಇವರು ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಹಾವೀರ ಅಜ್ರಿ, ಎಸ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪಾರ್ಶ್ವನಾಥ ಅಜ್ರಿ, ಫೆಸ್ಟ್ ನ ಸಂಯೋಜಕರಾದ ಶ್ರೀ ರಾಹುಲ್ ಮತ್ತು ಶ್ರೀಮತಿ ಕೀರ್ತನಾ ರಾವ್, ವಿದ್ಯಾರ್ಥಿ ನಾಯಕನಾದ ಶ್ರೀ ಅನಿಕೇತ್ ಭಂಡಾರಿ, ವಿದ್ಯಾರ್ಥಿ ಸಂಯೋಜಕರಾದ ಕು. ಸುಲಕ್ಷ ಮತ್ತು ಕು. ವಿಜೇತಾ ಕಾಮತ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಹಾವೀರ ಅಜ್ರಿ. ಎಸ್. ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಕೆ. ಹೇಮರಾಜ್, ಸಂಚಾಲಕರು, ಶ್ರೀ. ಡಿ. ಜೆ. ವಿ. ಸಂಘ ಮೂಡಬಿದ್ರೆ ಬಹುಮಾನವನ್ನು ವಿತರಿಸಿದರು. ಮತ್ತೊರ್ವ ಅತಿಥಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ CA ಅಭಿನಯ ಕುಲಾಲ್, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಮೂಹ ನೃತ್ಯ, ಕ್ವಿಜ್, ಮೊಕ್ ಪ್ರೆಸ್, ಟ್ರೇಸರ್ ಹಂಟ್, ಫೋಟೋಗ್ರಫಿ, ಮ್ಯಾಡ್ ಅಡ್, ಮಾರ್ಕೆಟಿಂಗ್, ಇ - ಪೋಸ್ಟರ್ ಮೇಕಿಂಗ್, ಬಾಟಲ್ ಆರ್ಟ್, ಬ್ರೈಡ ಲ್ ಮೇಕಪ್, ಮೋಟಾರ್ ಮೌತ್ ಮತ್ತು ಬೆಸ್ಟ್ ಮೆನೇಜರ್ ಸ್ಪರ್ಧೆಗಳು ನಡೆದವು.
ಸಮಗ್ರ ಪ್ರಶಸ್ತಿಯನ್ನು ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು, ಹಾಗೂ ರನ್ನರ್ ಅಪ್ ಸ್ಥಾನವನ್ನು ಕಾರ್ಕಳದ ಎಸ್. ಎನ್. ವಿ ಪದವಿ ಪೂರ್ವ ಕಾಲೇಜು ಪಡೆದುಕೊಂಡವು.
ಕನ್ನಡ ವಿಭಾಗದ ಮುಖ್ಯಸ್ಥೆಯಾಗಿರುವ ಶ್ರೀಮತಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ಕು. ಸಹನಾ ಭಂಡಾರಕರ್ ಸ್ವಾಗತಿಸಿ, ಶ್ರೀ ರಾಹುಲ್ ವಂದಿಸಿದರು.
0 Comments