*ಸಿಸಿಲಿಯ ಡಿಸೋಜ ಅವರಿಗೆ ಪಿ ಎಚ್ ಡಿ ಪದವಿ*
ಮೂಡುಬಿದಿರೆ:ಸಿಸಿಲಿಯ ಹೆಲೆನ್ ಡಿಸೋಜ ಅವರು ಶಿಕ್ಷಣ ಶಾಸ್ತ್ರವಿಭಾಗದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರೌಢಶಾಲಾ ಶಿಕ್ಷಣದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಪಿ. ಎಚ್. ಡಿ. ಪದವಿ ನೀಡಿ ಗೌರವಿಸಿದೆ.
ಇವರು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಡಾ. ಕರಿಬಸನ ಗೌಡ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಸಿದ್ಧಪಡಿಸಿ ಮಂಡಿಸಿರುತ್ತಾರೆ. ಮೂಡುಬಿದಿರೆ ಹೋಲಿರೋಸರಿ ಪ್ರೌಢಶಾಲೆಯ ಇಂಗ್ಲಿಷ್ ಭಾಷಾ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಈ ಮೊದಲು ಉಡುಪಿಯ ಸೈಂಟ್ ಸಿಸಿಲಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಮೂರು ಬಾರಿ ಜಿಲ್ಲಾ ಮಟ್ಟದ ಸಾಧಕ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಉಡುಪಿ ಜಿಲ್ಲೆಯ ಕಟ್ಟಂಗೇರಿ ಕಂಬಳ ಮನೆಯ ಜಾಕೋಬ್ ಡಿಸೋಜ-ಬೆನೆಡಿಕ್ಟಾ ಡಿಸೋಜ ಅವರ ಪುತ್ರಿಯಾಗಿದ್ದು, ಉಡುಪಿ ಜಿಲ್ಲೆಯ ಹೆಜಮಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ವಿನ್ಸೆಂಟ್ ವಿನೋದ್ ಡಿಸೋಜ ಕಿನ್ನಿಗೋಳಿ ಅವರ ಪತ್ನಿಯಾಗಿರುತ್ತಾರೆ.
0 Comments