ವೀರಸೇನ ಹೆಗ್ಡೆ ಬೆಳುವಾಯಿ ನಿಧನ:ಜೈನ ಮಠದ ಶ್ರೀಗಳಿಂದ ಸಂತಾಪ

ಜಾಹೀರಾತು/Advertisment
ಜಾಹೀರಾತು/Advertisment

ವೀರಸೇನ ಹೆಗ್ಡೆ ಬೆಳುವಾಯಿ ನಿಧನ:ಜೈನ ಮಠದ ಶ್ರೀಗಳಿಂದ ಸಂತಾಪ



ಸಹಕಾರ ಪ್ರಮುಖ ವೀರಸೇನ ಹೆಗ್ಡೆಯವರು ನಿಧನರಾಗಿದ್ದು ಮೂಡುಬಿದಿರೆ ದಿಗಂಬರ ಜೈನ ಮಠದ ಶ್ರೀಗಳಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಮಾಳ ಗ್ರಾಮದಲ್ಲಿ ಹುಟ್ಟಿ ಬಾಲ್ಯ ದಿಂದಲೇ ಲೌಕಿಕ ಶಿಕ್ಷಣ ದೊಂದಿಗೆ ಕಾರ್ಕಳ ಭುಜಬಲಿ ಬ್ರಹ್ಮಚರ್ಯ ಆಶ್ರಮ ವಿದ್ಯಾರ್ಥಿ ಯಾಗಿ ಧಾರ್ಮಿಕ ವಾತಾವರಣ ದಲ್ಲಿ ಬೆಳದು ಬೆಳುವಾಯಿ ಕೇಸರ್ ಗದ್ದೆ ವ್ಯೆವಸಾಯ ಸಹಕಾರಿ ಬ್ಯಾಂಕ್ ಉದ್ಯೋಗಿ ಯಾಗಿ,ಸುಮಾರು ಮೂರು ದಶಕಕ್ಕೂ ಹೆಚ್ಚು ವರ್ಷ ಪ್ರಬಂಧಕರಾಗಿ ಜನಾನುರಾಗಿ  ಉದ್ಯಮಿ ಯಾಗಿ ಭಾರತ್ ಸೌಹಾರ್ದ ಸಹಕಾರಿ ಬ್ಯಾಂಕ್ ಆಡಳಿತಗಾರಗಿ ಸಮಾಜ ಸೇವೆ ಯಲ್ಲಿ ತೊಡಗಿಸಿದ್ದ ಶ್ರೀಯುತರು ಸ್ವಸ್ತಿಶ್ರೀ ಜೈನ ವಸತಿ ಕಾಲೇಜು ಆಡಳಿತ ಸದಸ್ಯರಾಗಿ ಕಳೆದ ಐದು ವರ್ಷ ಸೇವೆ ಸಲ್ಲಿಸಿ ಇಂದು ಮೂಡುಬಿದಿರೆಯಲ್ಲಿ ಸ್ವರ್ಗಸ್ಥ ರಾಗಿದ್ದು ಅವರು ಪತ್ನಿ ಶ್ರೀಮತಿ ಪದ್ಮಲತಾ ಪುತ್ರ ತೇಜಸ್ ಹೆಗ್ಡೆ ಪುತ್ರಿ ನವ್ಯ ಹೆಗ್ಡೆ ಅಳಿಯ ಸೇರಿದಂತೆ ಅಪಾರ ಬಂದು ಬಾಂಧವರನ್ನು ಅಗಲಿರುತ್ತಾರೆ ಶ್ರೀಯುತರ ಅಗಲಿದ ಆತ್ಮಕ್ಕೆ  ಉತ್ತಮ ಸದ್ಗತಿ ಪ್ರಾಪ್ತಿ ಯಾಗಲಿ ಅವರ ಅಗಲುವಿಕೆ ಯಿಂದ ಆಗಿರುವ ನೋವನ್ನು ಸಹಿಸುವ ಶಕ್ತಿ ಅವರ ಪತ್ನಿ ಮಕ್ಕಳು ಕುಟುಂಬ, ಇಷ್ಟ ಮಿತ್ರ ರಿಗೆ ಸಿಗಲೆಂದು ಭಗವಾನ್ ಪಾರ್ಶ್ವ ನಾಥ ಸ್ವಾಮಿ ಜಿನಶಾಸನ ದೇವತೆ ಗಳಲ್ಲಿ ಪ್ರಾರ್ಥಿಸುತ್ತೇವೆ.


ಓಂ ಶಾಂತಿ

ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ, ಶ್ರೀ ದಿಗಂಬರ ಜೈನ ಮಠ ಮೂಡು ಬಿದಿರೆ ದ.ಕ ಕರ್ನಾಟಕ

Post a Comment

0 Comments