ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ 4 ನೂತನ ದಾಖಲೆಗಳು
ಮೂಡುಬಿದಿರೆ : ಎರಡು ದಿನಗಳ ಕಾಲ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ದ.ಕ. ಜಿಲ್ಲಾ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಮಂಗಳವಾರ ನೂತನ 4 ಕೂಟ ದಾಖಲೆಗಳು ನಿರ್ಮಾಣವಾಗಿವೆ.
೧೭ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ ೧೫೦೦ ಮೀ. ಓಟದಲ್ಲಿ ಕಡಬ ಸರಕಾರಿ ಪ.ಪೂ. ಕಾಲೇಜಿನ ಚರಿಷ್ಮಾ (೪:೫೩.೯ ಸೆ) ಹೊಸ ದಾಖಲೆ ಬರೆಯುವ ಮೂಲಕ ೨೦೦೪ರಲ್ಲಿ ಎಡಪದವು ಸ್ವಾಮಿ ವಿವೇಕಾನಂದ ಪ.ಪೂ. ಕಾಲೇಜಿನ ಸೌಮ್ಯ ಕೆ.ಪಿ. ಅವರ ಹೆಸರಲ್ಲಿದ್ದ ದಾಖಲೆ (೫:೦೧.೭ಸೆ.) ಅಳಿಸಿದ್ದಾರೆ. ಹಾಗೂ ೩,೦೦೦ ಮೀ. ಓಟದಲ್ಲೂ ಕೂಡಾ ಚರಿಷ್ಮಾ (೧೦:೪೪.೭ ಸೆ.) ಹೊಸ ದಾಖಲೆ ನಿರ್ಮಿಸಿ ೨೦೦೪ರಲ್ಲಿ ಎಸ್‌ಡಿಎಂ ಉಜಿರೆ ಆ.ಆ.ಮಾ. ಪ್ರೌಢಶಾಲೆಯ ದಿವ್ಯಾ ಜಿ.ಗೌಡ (೧೦:೪೯.೪೦ ಸೆ.) ಅವರು ಮಾಡಿದ್ದ ದಾಖಲೆಯನ್ನು ಬದಿಗೆ ಸರಿಸಿದ್ದಾರೆ.
೧೪ವರ್ಷದೊಳಗಿನ ಬಾಲಕಿಯರ ೬೦೦ ಮೀ. ಓಟದಲ್ಲಿ ಪುತ್ತೂರು ವಿವೇಕಾನಂದ ಇಎಂಎಸ್‌ನ ದಿವಿಜ್ಞಾ ವಿ.ಎಸ್.(೧:೪೪.೭೦ ಸೆ) ಅವರು ೨೦೧೧ರಲ್ಲಿ ಮಂಗಳೂರು ಸೈ. ಆಗ್ನೆಸ್ ಹೈಸ್ಕೂಲಿನ ವೆನಿಸ್ಸಾ ಕರೋಲ್ ಕ್ವಾಡ್ರಸ್ (೧:೪೫.೩೦ ಸೆ.) ಅವರ ದಾಖಲೆಯನ್ನು ಮುರಿದಿದ್ದಾರೆ.
ಇದೇ ವಿಭಾಗದ ೪ ಇಂಟು ೪೦೦ ಮೀ. ರಿಲೇ ಯಲ್ಲಿ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಹೈಸ್ಕೂಲಿನ ತಂಡ (೫೫.೭ ಸೆ.)ವು ೨೦೧೬ರಲ್ಲಿ ಅದೇ ಶಾಲೆಯ ತಂಡದ ದಾಖಲೆ (೫೬.೭ ಸೆ.)ಯನ್ನು ಬದಿಗೆ ಸರಿಸಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ವೈಯಕ್ತಿಕ ಚ್ಯಾಂಪಿಯನ್‌ಶಿಪ್ :
ಪ್ರಾಥಮಿಕ ಶಾಲೆ: ಪುತ್ತೂರು ಹಳೆನೇರಂಕಿ ಸರಕಾರಿ ಶಾಲೆಯ ಜಯೇಶ್(೧೫ ಅಂಕ) , ಮಂಗಳೂರು ಉತ್ತರದ ಕಾಟಿಪಳ್ಳದ ಇನ್‌ಫೆಂಟ್ ಮೇರಿ ಇಎಂಎಸ್ ಜಯಲಕ್ಷಿ÷್ಮ(೧೫ ಅಂಕ),
೧೪ರೊಳಗಿನ ಹುಡುಗರಲ್ಲಿ ಮಂ.ಉತ್ತರದ ಇಡ್ಯ ಮಹಾಲಿಂಗೇಶ್ವರ ಇಎಂಎಸ್‌ನ ನಿಹಾಲ್ ಕರ್ಕೆರಾ (೧೫ ಅಂಕ),
೧೪ರೊಳಗಿನ ಹುಡುಗಿಯರಲ್ಲಿ ಪುತ್ತೂರು ವಿವೇಕಾನಂದ ಇಎಂಎಚ್‌ಎಸ್‌ನ ದಿವಿಜ್ಞಾ ಯು.ಎಸ್.(೧೫ ಅಂಕ)
,೧೭ರೊಳಗಿನ ಬಾಲಕರಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಹೈಸ್ಕೂಲ್‌ನ ಗೊರವರ ಚೆನ್ನಬಸವರಾಜ (೧೩ ಅಂಕ), ಬಾಲಕಿಯರಲ್ಲಿ ಕಡಬ ಸಪಪೂ ಕಾಲೇಜಿನ ಚರಿಷ್ಮಾ (೧೫ ಅಂಕ) ಇವರು ವೈಯಕ್ತಿಕ ಚ್ಯಾಂಪಿಯನ್‌ಶಿಪ್ ಗಳಿಸಿದ್ದಾರೆ.
ತಂಡಪ್ರಶಸ್ತಿ: ಪ್ರಾಥಮಿಕ ಶಾಲಾ ಹುಡುಗರ ವಿಭಾಗದಲ್ಲಿ ಪುತ್ತೂರು, ಬಾಲಕಿಯರ ವಿಭಾಗದಲ್ಲಿ ಮಂಗಳೂರು ಉತ್ತರ, ೨.ಪುತ್ತೂರು, ೧೪ರೊಳಗಿನ ಹುಡುಗರಲ್ಲಿ ಮಂಗಳೂರು ಉತ್ತರ, ಉಳಿದಂತೆ ೧೪ರೊಳಗಿನ ಬಾಲಕಿಯರು, ೧೭ರೊಳಗಿನ ಬಾಲಕರು ಮತ್ತು ಬಾಲಕಿಯರು ಈ ಮೂರೂ ವಿಭಾಗಗಳಲ್ಲಿ ಪುತ್ತೂರು ತಾ. ತಂಡಗಳು ತಂಡಪ್ರಶಸ್ತಿಗಳನ್ನು ಎತ್ತಿಕೊಂಡಿವೆ.
0 Comments