ಕೊಳಚೆ ನೀರು ಚರಂಡಿಗೆ ಆರೋಪಿಸಿ ಧರಣಿ ಕುಳಿತ ಸಾಮಾಜಿಕ ಕಾರ್ಯಕರ್ತ ಮಧ್ಯಾಹ್ನದ ವೇಳೆ ಹಿಂದಕ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಕೊಳಚೆ ನೀರು ಚರಂಡಿಗೆ ಆರೋಪಿಸಿ 

ಧರಣಿ ಕುಳಿತ ಸಾಮಾಜಿಕ ಕಾರ್ಯಕರ್ತ ಮಧ್ಯಾಹ್ನದ ವೇಳೆ ಹಿಂದಕ್ಕೆ





ಮೂಡುಬಿದಿರೆ:  ಕಡಲ ಕೆರೆ ಕೈಗಾರಿಕಾ ಪ್ರದೇಶದಿಂದ ಸಾರ್ವಜನಿಕ ರಸ್ತೆ ಸಾರ್ವಜನಿಕ ಜನ ವಸತಿ ಪ್ರದೇಶಕ್ಕೆ ಕೊಳಚೆ ನೀರು ಬರುತ್ತಿದ್ದು  ಸುಮಾರು ಮೂರು ವರ್ಷಗಳಿಂದ ಸತತ ದೂರು ನೀಡಿದ್ದರೂ  ಪುರಸಭೆಯು ಕ್ರಮಕೈಗೊಂಡಿಲ್ಲವೆಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ರಾಜೇಶ್ ಕಡಲಕೆರೆ ಅವರು ಪುರಸಭಾ ಕಛೇರಿಯ ಮುಂಭಾಗ ಗುರುವಾರ ಧರಣಿ ಕುಳಿತು ಪುರಸಭೆಗೆ ಧಿಕ್ಕಾರವನ್ನು ಕೂಗಿದರು.



 ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗಳಿಂದ ಹೊರ ಬಿಡುತ್ತಿರುವ ಕೊಳಚೆ ನೀರು ರಸ್ತೆ ಬದಿಯ ಚರಂಡಿಗಳಲ್ಲಿ ಹರಿದು ಹೋಗುತ್ತಿದ್ದು ಇದು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುವಂತಿದೆ ಅಲ್ಲದೆ ಇಲ್ಲಿನ ಕೊಳಚೆ ಪುತ್ತಿಗೆ ಪಂಚಾಯತ್ ವ್ಯಾಪ್ತಿ ಕಡೆಗೂ ಹರಿಯುತ್ತಿದ್ದು ಈ ಬಗ್ಗೆ ಪಂಚಾಯತ್ ನ ಪಿಡಿಒ ಅವರು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ್ದರೂ ಪುರಸಭೆಯ ಪರಿಸರ ಅಭಿಯಂತರರು ಕ್ರಮಕೈಗೊಂಡಿಲ್ಲವೆಂದು ಹೇಳಿದ ಅವರು ಕೊಳಚೆ ನೀರು ಹೊರ ಬಿಡುತ್ತಿರುವ ಕಾರ್ಖಾನೆಯು ಪರವಾನಿಗೆಯನ್ನೂ ನವೀಕರಣಗೊಳಿಸಿಲ್ಲವೆಂದು ಆರೋಪಿಸಿದರು. 





ಧರಣಿಯನ್ನು ವಾಪಾಸ್ ಪಡೆದ ಕಾರ್ಯಕರ್ತ : ಮುಖ್ಯಾಧಿಕಾರಿ ಇಂದು ಎಂ.ಮತ್ತು ಪರಿಸರ ಅಭಿಯಂತರೆ ಶಿಲ್ಪಾ ಅವರು ರಾಜೇಶ್ ಅವರು ಧರಣಿ ಕುಳಿತ ಸ್ಥಳಕ್ಕೆ ಆಗಮಿಸಿ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದಾಗ  11.30ರಿಂದ ಪುರಸಭೆಯ ಮುಂಭಾಗದಲ್ಲಿ ಧರಣಿ ಕುಳಿತ ಸಾಮಾಜಿಕ ಕಾರ್ಯಕರ್ತ ರಾಜೇಶ್ ಕಡಲಕೆರೆ ಮಧ್ಯಾಹ್ನದ ವೇಳೆಗೆ ಧರಣಿಯಿಂದ ಹಿಂದೆ ಸರಿದರು.


ಪುರಸಭಾ ಮುಖ್ಯಾಧಿಕಾರಿ : ಕಡಲಕೆರೆ ಕೈಗಾರಿಕಾ ಪ್ರದೇಶದಲ್ಲಿ ಹೊರ ಬರುತ್ತಿರುವ ಗ್ರೇ ವಾಟರ್ ಗಾಗಿ ಈಗಾಗಲೇ ಟ್ಯಾಂಕನ್ನು ನಿರ್ಮಿಸಲಾಗಿದ್ದು ಸಂಪರ್ಕ ಕಲ್ಪಿಸಲು ಮಾತ್ರ ಬಾಕಿ ಇದ್ದು ಸಂಪರ್ಕ ಕಲ್ಪಿಸಿದ ತಕ್ಷಣ ವ್ಯವಸ್ಥೆ ಮಾಡಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Post a Comment

0 Comments