*ಮೂಡುಬಿದಿರೆ ಪೊನ್ನೆಚಾರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ*
ಮೂಡುಬಿದಿರೆ ಪೊನ್ನೆಚಾರಿ ಶಾರದಾ ಮಹೋತ್ಸವದ ಮೂಡುಬಿದಿರೆ ದಸರಾ -2023 ರ ಶಾರದಾ ಕಲಾಮಂಟಪದಲ್ಲಿ ಮೂಡುಬಿದಿರೆಯ ಉದ್ಯಮಿ, ಸಮಾಜಸೇವಕರು ಆಗಿರುವ
ಶ್ರೀ ಕೆ. ವಿಶ್ವನಾಥ ಪ್ರಭು ಅವರಿಗೆ ಶಾರದೋತ್ಸವ ಸಮಿತಿಯ ವತಿಯಿಂದ ಶಾರದಾನುಗ್ರಹ -2023 ಪ್ರಶಸ್ತಿಯನ್ನು ಮತ್ತು ಮೂಡುಬಿದಿರೆಯ ಸ್ಪೂರ್ತಿ ವಿಶೇಷ ಶಾಲೆಯ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಶೆಟ್ಟಿಗಾರ್ ಅವರಿಗೆ ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಿರಿಪುರ -2023 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಐದು ಶತಮಾನಗಳ ಇತಿಹಾಸವನ್ನು ಹೊಂದಿರುವ ಮೂಡುಬಿದಿರೆ ಲಕ್ಷ್ಮಿ ವೆಂಕಟರಮಣ ದೇವಾಲಯದ ಅನುವಂಶಿಕ ಆಡಳಿತ ಮುಖ್ಯಸ್ಥರರಾದ ಶ್ರೀ ಅಶೋಕ್ ಕಾಮತ್ ಅವರ ನೇತೃತ್ವದಲ್ಲಿ ನಡೆಯುವ ಶಾರದಾ ಮಹೋತ್ಸವ ಸಮಾರಂಭದಲ್ಲಿ ಕಳೆದ ಎರಡು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಸಾಧಕರನ್ನು ಶಾರದಾ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸುವ ಪರಂಪರೆಯನ್ನು ಬೆಳೆಸಿಕೊಂಡು ಬರಲಾಗಿದೆ. ಈ ವರ್ಷದ
ಶಾರದಾನುಗ್ರಹ ಪ್ರಶಸ್ತಿಗೆ ಮೂಡುಬಿದಿರಿಯ ಪ್ರಸಿದ್ಧ ಉದ್ಯಮಿಗಳಾಗಿದ್ದು ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದ ಬಾಲಾಜಿ ಶ್ರೀ ಕೆ.ವಿಶ್ವನಾಥ ಪ್ರಭು ಅವರಿಗೆ ನೀಡಿ ಗೌರವಿಸಲಾಯಿತು.
ಮೂಡುಬಿದಿರೆ ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ 21 ವರ್ಷಗಳ ಹಿಂದೆ 2002ರಲ್ಲಿ ಹುಟ್ಟಿಕೊಂಡ ಸಾಹಿತ್ಯ ಸಂಘಟನೆ ಸಾಹಿತ್ಯ ಸೌರಭ ಮೂಡುಬಿದರೆ ಇದರ ಅಂಗಸಂಸ್ಥೆಯಾಗಿದ್ದು ಯುವ ಜನಾಂಗದಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ಉಂಟುಮಾಡುವ ಕಾರ್ಯಕ್ರಮಗಳನ್ನು, ತರಬೇತಿಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ಒಂದು ಸಂಘಟನೆಯಾಗಿದೆ. ಇದರ ಜೊತೆಯಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ಸಿರಿಪುರ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತ ಬಂದಿದೆ. ಈ ಬಾರಿಯ ಸಿರಿಪುರ ಪ್ರಶಸ್ತಿ- 2023 ಯನ್ನು ಸಮಾಜ ಸೇವಕರು,ಸ್ಪೂರ್ತಿ ವಿಶೇಷ ಶಾಲೆಯ ಸಂಸ್ಥಾಪಕರು ಆಗಿರುವ ಶ್ರೀ ಪ್ರಕಾಶ್ ಶೆಟ್ಟಿಗಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಪೊನ್ನೆಚಾರಿ ಶಾರದೋತ್ಸವ ಸಮಾರಂಭದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ವೇದಿಕೆಯಲ್ಲಿ ಪೊನ್ನೆಚಾರಿ ಶಾರದ ಮಹೋತ್ಸವದ ರೂವಾರಿ ಶ್ರೀ ಅಶೋಕ್ ಕಾಮತ್, ಸಿನಿಪುರ ಸಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರಾಮಕೃಷ್ಣ ಶಿರೂರು, ಪುರಸಭಾ ಸದಸ್ಯರಾದ ಶ್ರೀ ಸುರೇಶ್ ಪ್ರಭು, ರೈತ ಸಂಘದ ನಾಯಕರು, ಶಾರದ ಮಹೋತ್ಸವ ಸಮಿತಿಯ ಸಕ್ರಿಯ ಕಾರ್ಯಕರ್ತರು ಆಗಿರುವ ಶ್ರೀ ಸುರೇಶ್ ಕುಮಾರ್, ಹಿರಿಯ ಪತ್ರಕರ್ತರಾಗಿರುವಂತ
ಶ್ರೀ ಧನಂಜಯ ಮೂಡುಬಿದಿರೆ, ಶ್ರೀಮತಿ ರಾಜಶ್ರೀ ವಿಶ್ವನಾಥ ಪ್ರಭು, ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ನಾಗರತ್ನ ಶಿರೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ರಾಮಕೃಷ್ಣ ಶಿರೂರು ಪ್ರಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ನಾಗರತ್ನ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಮಹೇಶ್ವರಿ ಅವರು ಧನ್ಯವಾದ ಸಲ್ಲಿಸಿದರು.
0 Comments