ತಾಳ್ಮೆ ಮತ್ತು ಶಿಸ್ತಿನ ಜೀವನದಲ್ಲಿ ಯಶಸ್ಸಿದೆ- ರಶ್ಮಿತಾ ಜೈನ್
ಮೂಡುಬಿದಿರೆ:- ತಾಳ್ಮೆ ಮತ್ತು ಶಿಸ್ತು ಮನುಷ್ಯನ ಜೀವನದಲ್ಲಿ ಅನಿವಾರ್ಯವಾಗಿದ್ದು ಅದು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.
ಅವರು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವರು ಸ್ವಚ್ಛ ಮನಸ್ಸು , ಸ್ವಚ್ಛ ಪರಿಸರವು ವ್ಯಕ್ತಿ ಮತ್ತು ದೇಶದ ಪ್ರಗತಿಗೆ ಅವಶ್ಯಕ ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಮುಂದುವರಿಯಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ಸಮಾರೋಪ ಭಾಷಣ ಮಾಡಿ ಒಗ್ಗಟ್ಟು, ಒಮ್ಮತದ ಮಹಾನಡೆಗಳು ನಮ್ಮ ಜೀವನಡೆಗಳನ್ನು ನಾಯಕತ್ವದೆಡೆಗೆ ಒಯ್ಯುತ್ತದೆ ಎಂದು ಹೇಳಿದರು.
ನಿತ್ಯಸಹಾಯ ಮಾತೆ ದೇವಾಲಯ, ಗಂಟಾಲಕಟ್ಟೆ ಇಲ್ಲಿಯ ಪ್ರಧಾನ ಧರ್ಮಗುರುಗಳಾದ ವಂ. ರೊನಾಲ್ಡ್ ಡಿ.ಸೋಜಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಬದ್ಧತೆ, ಶ್ರದ್ಧೆ, ಸಮಾಜಪ್ರೀತಿ, ರಾಷ್ಟ್ರೀಯತೆ ಸೇವಾ ಯೋಜನೆಯ ಮೂಲಕ ಪ್ರತಿಯೋರ್ವನು ಅವಖಾಶಗಳನ್ನು ಪಡೆದುಕೊಳ್ಳ ಬಹುದು. ಸಿಕ್ಕ ಅವಕಾಶಗಳನ್ನು ಧನಾತ್ಮಕವಾಗಿ ಬಳಸಿಕೊಂಡು ನಮ್ಮ ಸೃಜನಶೀಲತೆಯ ಮೂಲಕ, ಸುಪ್ತ ಪ್ರತಿಭೆಯ ಮೂಲಕ ಬೆಳೆಸುವುದೇ ಈ ಶಿಬಿರದಿಂದ ನೀವು ಪಡೆದ ಲಾಭಗಳು ಎಂದರು.
ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್‌ಕುಮಾರ್ ಶೆಟ್ಟಿ, ಉಪಪ್ರಾಂಶುಪಾಲ ಮನೋಜ್‌ಕುಮಾರ್, ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್ ನ ಉಪಪ್ರಾಂಶುಪಾಲೆ ವಿಮಲಾ ಶೆಟ್ಟಿ, ಕರಿಂಜೆ ನಾಗಬ್ರಹ್ಮ ರಕ್ತೇಶ್ವರಿ ಸೇವಾಟ್ರಸ್ಟ್ ಕಾರ್ಯದರ್ಶಿ ಶಶಿಧರ್ ಶೆಟ್ಟಿ, ಎಕ್ಸಲೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಬಿ.ಪಿ. ಸಂಪತ್ ಕುಮಾರ್ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಅಪೇಕ್ಷಾ, ಅಶ್ವಿನ್, ಚಂದ್ರಶೇಖರ್, ವಿಮರ್ಶಾ ಜೈನ್, ಸಿಂಚನಾ, ಅನಿಸಿಕೆಯನ್ನು ಹಂಚಿಕೊಂಡರು.
ನಾಯಕತ್ವ ಗುಣಗಳಿಗೆ ಕೊಡುವ ವಿಶೇಷ ಬಹುಮಾನಗಳನ್ನು ಕೊಡುವ ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಪ್ರದೀಪ ಕೆ.ಪಿ, ಅವರು ನಡೆಸಿಕೊಟ್ಟರು. ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಸಂಧ್ಯಾಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ತೇಜಸ್ವೀ ಭಟ್ ವಂದಿಸಿದರು.
0 Comments