ನಕಲಿ ಹಕ್ಕುಪತ್ರಕ್ಕಾಗಿ ಲಕ್ಷ ರೂ ವಂಚನೆ : ವ್ಯಕ್ತಿ ಪೊಲೀಸರ ವಶಕ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ನಕಲಿ ಹಕ್ಕುಪತ್ರಕ್ಕಾಗಿ ಲಕ್ಷ ರೂ ವಂಚನೆ : ವ್ಯಕ್ತಿ ಪೊಲೀಸರ ವಶಕ್ಕೆ



ಮೂಡುಬಿದಿರೆ : 94 ಸಿಯಲ್ಲಿ ನಕಲಿ ಹಕ್ಕುಪತ್ರ ಮಾಡಿಕೊಡುವುದಾಗಿ ನಂಬಿಸಿ ಲಕ್ಷ ರೂವನ್ನು ಪಡೆದು ವಂಚಿಸಿರುವ ವ್ಯಕ್ತಿಯನ್ನು ಮೂಡುಬಿದಿರೆ ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಇರುವೈಲಿನ ಗಂಗಾಧರ ಪೂಜಾರಿ ಬಂಗಾರು ಎಂಬವರಿಗೆ ದಿನೇಶ್ ಬಾಂಬಿಲ ಎಂಬ ವ್ಯಕ್ತಿ ನಕಲಿ ಹಕ್ಕುಪತ್ರ ಮಾಡಿಕೊಡುವುದಾಗಿ ರೂ 1 ಲಕ್ಷ 4 ಸಾವಿರವನ್ನು ಪಡೆದುಕೊಂಡು  ನಂತರ ಹಕ್ಕುಪತ್ರ  ಮಾಡಿಕೊಡದೆ ವಂಚನೆ ಮಾಡಿದ್ದರು. ಈ ಬಗ್ಗೆ ಗಂಗಾಧರ್ ಅವರು  ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಅವರು ತಾಲೂಕು ಕಛೇರಿ ಬಳಿ ಸೋಮವಾರ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

Post a Comment

0 Comments