ಶ್ರೀ ಮಹಾವೀರ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಶ್ರೀ ಮಹಾವೀರ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಉದ್ಘಾಟನೆ



ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಉದ್ಘಾಟನೆಗೊಂಡಿತು.



ಕಾಲೇಜಿನ ಹಳೆ ವಿದ್ಯಾರ್ಥಿ, ಮಂಗಳೂರು ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಮೇಲ್ವೀಚಾರಕ  ಡಾ.ದುರ್ಗಾ ಪ್ರಸಾದ್ ಎಂ.ಆರ್.ಅವರು ಸಮಿತಿಯನ್ನು ಉದ್ಘಾಟಿಸಿ ಮಾತನಾಡಿ ನಾವು ವೈಜ್ಞಾನಿಕವಾಗಿ ಪಕ್ಷಿಗಳನ್ನು, ಜಲಚರಗಳನ್ನು ಮೀರಿ ಬೆಳೆದಿದ್ದೇವೆ ಎಂಬ ಅಹಂಕಾರ ನಮ್ಮಲ್ಲಿದೆ ಆದರೆ ನಾವು ಬದುಕಲು ಪ್ರಕೃತಿ  ಬಹುಮುಖ್ಯ ಎಂಬುದನ್ನು ಮರೆಯುತ್ತಿದ್ದೇವೆ. ಮನುಷ್ಯತ್ವ ಇದ್ದರೆ ಮಾತ್ರ ಮನುಷ್ಯ ಮನುಷ್ಯರಾಗಿದ್ದೇವೆ ಎಂದು ಯೋಚಿಸಬೇಕಾಗಿದೆ. ಸಮಾಜಮುಖಿ ಚಿಂತನೆಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಿ.  ನಮ್ಮ ದಿನ ನಿತ್ಯದ ಜೀವನದಲ್ಲಿ ನಾವು ಕಲಿಯಬೇಕಾದುದು ತುಂಬಾ ಇದೆ ಆದ್ದರಿಂದ  ವಿದ್ಯಾರ್ಥಿಗಳು ಉತ್ತಮವಾದ ಪ್ರತಿಯೊಂದು ಮಾತನ್ನು ಕೇಳಿ ನಿಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಿ, ಕಠಿಣ ಪರಿಶ್ರಮ ಮುಂದೊಂದು ದಿನ ನಿಮ್ಮ ಜೀವನವನ್ನು ಉತ್ತಮಗೊಳಿಸುತ್ತದೆ.   ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಿ. ವಿದ್ಯಾರ್ಥಿ ಜೀವನದಲ್ಲಿ ಸಮಾಜದ ದುರಿತಗಳನ್ನು ಅರ್ಥಮಾಡಿಕೊಂಡು ಕಟ್ಟ ಕಡೆಯ ವ್ಯಕ್ತಿಗಳಿಗೆ ಅವಶ್ಯಕತೆ ಇರುವುದನ್ನು ನೀಡಿ ಎಂದು ಸಲಹೆ ನೀಡಿದರು.



 ಗವರ್ನಿಂಗ್ ಕೌನ್ಸಿಲ್‌ನ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ  ವಿದ್ಯಾರ್ಥಿ ಸಂಘವು ಕಾಲೇಜಿನ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕ್ರಿಯಾ ಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆಯಿತ್ತರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮತ್ತೋರ್ವ ಹಳೆ ವಿದ್ಯಾರ್ಥಿ ಮಸ್ಕತ್ ಉದ್ಯೋಗಿ ಗಂಗಾಧರ್ ಪೂಜಾರಿ ಸಂಸ್ಕೃತಿ, ಸಂಸ್ಕಾರ ಜೀವನದಲ್ಲಿ ಅಳವಡಿಸಿಕೊಂಡು ಬೆಳೆದಾಗ ವ್ಯಕ್ತಿತ್ವ ಪರಿಪೂರ್ಣಗೊಳ್ಳುತ್ತದೆ ಎಂದರು.

ಪಿಯು ವಿಭಾಗದ ಪ್ರಾಂಶುಪಾಲರಾದ ಪ್ರೊ. ರಮೇಶ್ ಭಟ್ ಶುಭ ಹಾರೈಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್ ಪ್ರಮಾಣ ವಚನ ಬೋಧಿಸಿದರು.



ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತಿನ್ ಸುವರ್ಣ, ಉಪಾಧ್ಯಕ್ಷರಾದ ದಿವ್ಯಾ, ಪ್ರಾಪ್ತಿ, ಕಾರ್ಯದರ್ಶಿ ಡೆರೆಲ್ ಸಿಕ್ವೇರಾ, ಜತೆ ಕಾರ್ಯದರ್ಶಿಗಳಾದ ಸಂಚಿತಾ, ಜ್ಯೋತಿಕಾ ವೇದಿಕೆಯಲ್ಲಿದ್ದರು. ಡೆರೆಲ್ ಸಿಕ್ವೇರಾ ಸ್ವಾಗತಿಸಿದರು. ಪ್ರಣಮ್ಯ, ದಿವ್ಯಾ ಅತಿಥಿಗಳನ್ನು ಪರಿಚಯಿಸಿದರು. ವಂದಿತಾ ವಿದ್ಯಾರ್ಥಿ ಪದಾಧಿಕಾರಿಗಳನ್ನು ಪರಿಚಯಿಸಿದರು. ಪ್ರಾಪ್ತಿ ತರಗತಿ ಪ್ರತಿನಿಧಿಗಳನ್ನು ಪರಿಚಯಿಸಿದರು.


ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಗ್ರಂಥಪಾಲಕಿ ನಳಿನಿ ಕೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಉಜ್ವಲ್ ಕುಮಾರ್ ಧನ್ಯವಾದವಿತ್ತರು. ಜೋಯ್ಲಿನ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments