ಮೂಡುಬಿದಿರೆ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಉಚಿತ ಆರೋಗ್ಯ ತಪಾಸಣಾ ಶಿಬಿರ



ಮೂಡುಬಿದಿರೆ: ರಾಷ್ಟ್ರಪಿತ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಮತ್ತು ಮಾಜಿ ಪ್ರಧಾನಿ ದಿ.ಲಾಲ್

ಬಹಾದ್ದೂರ್ ಶಾಸ್ತ್ರೀ ಅವರ ಜನ್ಮದಿನದ ಪ್ರಯುಕ್ತ  ಮೂಡು ಬಿದಿರೆ ಇತಿಹಾಸ ಪ್ರಸಿದ್ಧ ಸಾವಿರ ಕಂಬ ಬಸದಿಯ ರಮಾ ರಾಣಿ ಶೋದ ಸಂಸ್ಥಾನ ಬಳಿ ಇರುವ  ಭಟ್ಟಾರಕ ಸಭಾ ಭವನ ದಲ್ಲಿ ಅಯುಷ್ಮಾನ್ ಭಾರತ ಕಾರ್ಯಕ್ರಮದ ಅಂಗವಾಗಿ ಮೂಡುಬಿದಿರೆ  ತಾಲೂಕು ಅರೋಗ್ಯ ಕೇಂದ್ರದ ವತಿಯಿಂದ ದವಲತ್ರಯ ಜೈನ ಕಾಶಿ ಟ್ರಸ್ಟ್ (ರಿ ) ಆಶ್ರಯ ದಲ್ಲಿ ಉಚಿತ ಅರೋಗ್ಯ ತಪಾಸಣೆ ಶಿಬಿರ ನಡೆಯಿತು.

  ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ

ಅರೋಗ್ಯ ಅಭಿಯಾನ ಅಡಿಯಲ್ಲಿ ಅಯುಷ್ಮಾನ್ ಭಾರತ

ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊoಡು

ಕೇಂದ್ರ, ರಾಜ್ಯ ಸರಕಾರ ಸರ್ವರ ಪ್ರಶಂಸೆಗೆ ಪಾತ್ರ ವಾಗಿದೆ.‌ದೇಶದ ಸ್ವಾತಂತ್ರ್ಯ ಜಾಗೋ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ಮಹಾತ್ಮಾರಾದ ಗಾಂಧಿ, ಸರಳ ರಾಜಕೀಯ ನಾಯಕ ಶಾಸ್ತ್ರೀ ಜೀ ಹುಟ್ಟುಹಬ್ಬದ ಸಂಧರ್ಭ ಇಂತಹ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತೋಷ ಎಂದರು.

    ಪುರಸಭಾ ಸದಸ್ಯೆ ಶ್ವೇತಾ, ಮೂಡುಬಿದಿರೆ ಆರೋಗ್ಯ ಇಲಾಖೆ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಶ್ರೀ ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಉಪಸ್ಥಿತರಿದ್ದರು. 

ನೂರಕ್ಕೂ ಅಧಿಕ ಮಂದಿಗೆ ವಿವಿಧ ರೀತಿಯ ಉಚಿತ ಪರೀಕ್ಷೆ ಯನ್ನು ನಡೆಸಲಾಯಿತು.

ತಜ್ಞ

ದಂತ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್,  ಕೆಎಂಸಿ

ಮoಗಳೂರು ಇಲ್ಲಿನ ಹೃದಯ ತಜ್ಞ ಡಾ. ಡಿತೇಶ್ , ಚರ್ಮ ರೋಗ ತಜ್ಞೆ ಡಾ.ಅಲಿಯಾ ಪಿಂಟೋ,  ಜನರಲ್ ಮೆಡಿಸಿನ್ ನ ಡಾ. ನಿತಿನ್, ಮಕ್ಕಳ ತಜ್ಞೆ ಡಾ. ಮಾಯಾ, ನೇತ್ರ ತಜ್ಞ  ಡಾ. ಅವಿನಾಶ್  ಮುಂತಾದವರು 

ವಿವಿಧ ಚಿಕಿತ್ಸೆ, ಸಲಹೆ ಸೂಚನೆ ನೀಡಿ ಧೈರ್ಯ ತುಂಬಿದರು.

Post a Comment

0 Comments