ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಬೃಹತ್ ಸ್ವಚ್ಛತಾ ಅಭಿಯಾನ
ಮೂಡುಬಿದಿರೆ: ಇಲ್ಲಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಬೃಹತ್ ಸ್ವಚ್ಛತಾ ಅಭಿಯಾನ ಭಾನುವಾರ ಬೆಳಿಗ್ಗೆ ನಡೆಯಿತು.
ಕೀರ್ತಿನಗರ ಪರಿಸರದಲ್ಲಿ ನೇತಾಜಿ ಬ್ರಿಗೇಡ್ ನ ಸಂಚಾಲಕ ರಾಹುಲ್ ಕುಲಾಲ್, ಕಲ್ಲಬೆಟ್ಟು ಪರಿಸರದಲ್ಲಿ ಸ್ವರ್ಣಗೌರಿ ಮಾತೃ ಮಂಡಳಿ ಕಲ್ಲಬೆಟ್ಟು ಇದರ ಅಧ್ಯಕ್ಷೆ ಮಲ್ಲಿಕಾ ಜೆ.ಸಾಲ್ಯಾನ್, ಗಂಟಾಲ್ ಕಟ್ಟೆ ಪರಿಸರದಲ್ಲಿ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಇದರ ಅಧ್ಯಕ್ಷ ರೋನಿ ಫೆರ್ನಾಂಡಿಸ್, ಉರ್ಪೆಲ್ ಪಾದೆ ಪರಿಸರದಲ್ಲಿ ಉದ್ಯಮಿ ಹಸನಬ್ಬ ಸ್ವಚ್ಛತಾ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು.
ಜವನೆರ್ ಬೆದ್ರ ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಗಂಟಾಲ್ ಕಟ್ಟೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಮೀದ್, ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ನ ಕಾರ್ಯದರ್ಶಿ ಅಜಯ್ ಗ್ಲೆನ್ ಡಿ'ಸೋಜಾ, ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲೆ ದಿವ್ಯಾ ನಾಯಕ್ ಎನ್ನೆಸ್ಸ್ಸ್ ಶಿಭಿರಾಧಿಕಾರಿ ತೇಜಸ್ವಿ ಭಟ್, ಪಿ.ಆರ್ .ಒ ಚೈತ್ರಾ ರೈ ಮತ್ತು ಉಪನ್ಯಾಸಕರುಗಳು ಈ ಸಂದರ್ಭದಲ್ಲಿದ್ದರು.
0 Comments