ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಇರುವೈಲು ಪಂಚಾಯತ್ :
ಮೂಡುಬಿದಿರೆ: ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಾದ ಅನಾರೋಗ್ಯವನ್ನು ಹೊಂದಿರುವ ಇಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಇರುವೈಲು ಪಂಚಾಯತ್ ಮಾನವೀಯತೆ ಮೆರೆದಿದೆ.
ಇರುವೈಲು ಗ್ರಾಮದ ಹೊಸಮರಪದವು ನಿವಾಸಿಗಳಾದ ದೇವಕಿ ಶೆಡ್ತಿ ಹಾಗೂ ಅವರ ಮಗ ಸಂಜೀವ ಶೆಟ್ಟಿ ಅವರು ಅನಾರೋಗ್ಯ ಪೀಡಿತರಾಗಿ ಕಳೆದ ಮೂರು ದಿನಗಳಿಂದ ತಮ್ಮ ದೈನಂದಿನ ಚಟುವಟಿಕೆಯನ್ನೂ ಮಾಡಲಾಗದೆ ಮಲಗಿದ್ದಲ್ಲೇ ಎಲ್ಲವನ್ನೂl ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದರು.ಇದನ್ನು ಕಂಡ ನೆರೆಹೊರೆಯವರು ಗ್ರಾಮ ಪಂಚಾಯತಿಗೆ ಮಾಹಿತಿ ನೀಡಿದ್ದು , ಇದಕ್ಕೆ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್, ಮಾಜಿ ಅಧ್ಯಕ್ಷರಾದ ವಲೇರಿಯನ್ ಕುಟಿನ್ನ ಹಾಗೂ ಸದಸ್ಯರಾದ ನವೀನ್ ಪೂಜಾರಿ ಅವರು ತಕ್ಷಣ ಸ್ಪಂದಿಸಿ ಮೂಡುಬಿದಿರೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದ ಸಹಕಾರ ದೊಂದಿಗೆ ದೇವಕಿ ಶೆಡ್ತಿ ರವರನ್ನು ಮೂಡಬಿದಿರೆಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಅವರ ಮಗ ಸಂಜೀವ ಶೆಟ್ಟಿ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
0 Comments