ಬಿ.ಆರ್ ಪಿ ಫ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಪುಟ್ ಬಾಲ್ ಪಂದ್ಯಾಟಕ್ಕೆ ಚಾಲನೆ
ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಹಾಗೂ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಪ್ರೌಢಶಾಲಾ ಬಾಲಕ ಬಾಲಕಿಯರ ತಾಲೂಕು ಮಟ್ಟದ ಪುಟ್ ಬಾಲ್ ಪಂದ್ಯಾಟವು ಮಂಗಳವಾರ ಎಂ.ಕೆ.ಅನಂತ್ರಾಜ್ ಸ್ಮಾರಕ ಕ್ರೀಡಾಂಗಣದಲ್ಲಿ ನಡೆಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ವಿಶ್ವದ ಜನಪ್ರಿಯ ಕ್ರೀಡೆ ಪುಟ್ಬಾಲ್. ಕ್ರೀಡೆ ಮನುಷ್ಯನ ಆರೋಗ್ಯವನ್ನು ಕಾಪಾಡಿ ಯಶಸ್ಸನು ತಂದು ಕೊಡುತ್ತದೆ. ಕ್ರೀಡೆಗೆ ಸೂಕ್ತವಾದ ಪ್ರದೇಶ ಮೂಡುಬಿದಿರೆ ಇಲ್ಲಿ ಕ್ರೀಡೆಗೆ ಪೂರಕವಾಗಿ 400 ಮೀ.ನ ಸಿಂಥೆಟಿಕ್ ಟ್ರ್ಯಾಕ್, ಸ್ವಿಮ್ಮಿಂಗ್ ಫೂಲ್, ಜಿಮ್, ಕುಸ್ತಿಯ ಕಣ, ಸ್ಕೇಟಿಂಗ್ ಯಾಡ್೯ ಕೂಡ ಇದೆ. ಇಲ್ಲಿನ ವಿದ್ಯಾರ್ಥಿಗಳು ಫುಟ್ಬಾಲ್ ಕ್ರೀಡೆಯಲ್ಲಿ ಸಾಧನೆಯನ್ನು ಮಾಡಿ ರಾಜ್ಯ, ಅಂತರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವಂತ್ತಾಗಬೇಕೆಂದು ಶುಭ ಹಾರೈಸಿದರು.
ಪುರಸಭಾ ಸದಸ್ಯೆ ಸ್ವಾತಿ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪಂದ್ಯಗಳಲ್ಲಿ ಸೋಲು ಗೆಲುವು ಅನಿವಾರ್ಯ. ಸೋತವರು ಮುಂದಿನ ಜೀವನದಲ್ಲಿ ಇನ್ನೊಬ್ಬರಿಗೆ ಪ್ರೋತ್ಸಾಹಕರಾಗಬೇಕು. ನೀವು ಎಲ್ಲಿ ಹೇಗೆ ತಪ್ಪು ಮಾಡಿದ್ದೀರಿ ಎಂಬುದರ ಬಗ್ಗೆ ತಿಳಿಸಿಕೊಟ್ಟು ಗೆಲುವಿನ ಹಾದಿಗೆ ಸಹಕರಿಸಬೇಕೆಂದರು.
ಪುರಸಭಾ ಸದಸ್ಯ ಸುರೇಶ್ ಪ್ರಭು ಸಮಾಜ ಮಂದಿರ ಸಭಾದ ಸದಸ್ಯ ಸಿ.ಹೆಚ್. ಅಬ್ದುಲ್ ಗಫೂರ್, ಪಾರಿತೋಷಕದ ಪ್ರಾಯೋಜಕ, ಮುಚ್ಚೂರು ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಯನ್ ರೋಶನ್ ಡಿ'ಸೋಜಾ, ಬಪ್ಪನಾಡು ಲಯನ್ಸ್ ಕ್ಲಬ್ ನ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಅಜಿತ್ ಪ್ರಸಾದ್, ಅಕ್ರಂ ಶೇಖ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಪುತ್ರನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಎಸ್.,ನಿವೃತ್ತ ಮುಖ್ಯ ಶಿಕ್ಷಕರಾದ ಪದ್ಮಜಾ, ಬಾಹುಬಲಿ, ಹಳೆ ವಿದ್ಯಾರ್ಥಿ ಶಿವಾನಂದ ಪ್ರಭು,ಸಿಆರ್ ಪಿ ಮಹೇಶ್ವರಿ, ದಾಮೋದರ ಆಚಾರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಬಿಆರ್ ಪಿ ಯ ಮುಖ್ಯ ಶಿಕ್ಷಕಿ ತೆರೆಸಾ ಕರ್ಡೋಜ ಸ್ವಾಗತಿಸಿದರು. ಶಿಕ್ಷಕ ಅಣ್ಣು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕ್ಲೆಮೆಂಟ್ ಡಿ"ಸೋಜ ವಂದಿಸಿದರು.
0 Comments