ವಿವಾಹಿತ ಮಹಿಳೆ ನಾಪತ್ತೆ

ಜಾಹೀರಾತು/Advertisment
ಜಾಹೀರಾತು/Advertisment

 ವಿವಾಹಿತ ಮಹಿಳೆ ನಾಪತ್ತೆ

 


ಮೂಡುಬಿದಿರೆ: ಟಿ.ಬಿ.ಕಾಯಿಲೆಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಕಳೆದ ಹತ್ತು ದಿನಗಳ ಹಿಂದೆ ಪಾಲಡ್ಕದಿಂದ ಕಾಣೆಯಾದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

 ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ಕೇಮಾರು ನಿವಾಸಿ  ಶಾಲಿನಿ (38) ನಾಪತ್ತೆಯಾದ ಮಹಿಳೆ.

ಸೆ .2 ರಂದು ಬೆಳಿಗ್ಗೆ 10 ಗಂಟೆಗೆ ಮನೆಯಲ್ಲಿ ಯಾರಿಗೂ ಮಾಹಿತಿ ನೀಡದೆ ತೆರಳಿರುವ ಶಾಲಿನಿ ಅವರು  ಈವರೆಗೆ ವಾಪಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಇವರ ಪತಿ ಈ ಹಿಂದೆಯೇ  ನಿಧನರಾಗಿದ್ದು ಮೂವರು ಮಕ್ಕಳಿದ್ದಾರೆ. 

ನಾಪತ್ತೆಯಾಗಿರುವ ಶಾಲಿನಿ 152  ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ  ಸೆ.ಮೀ.ಎತ್ತರ ಹೊಂದಿದ್ದಾರೆ. ಕನ್ನಡ ತುಳು ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ನೀಲಿ ಮಿಶ್ರಿತ ಚೂಡಿ ಧರಿಸಿದ್ದು

ಇವರು ಪತ್ತೆಯಾದಲ್ಲಿ 

ಪೊಲೀಸ್ ನಿಯಂತ್ರಣ ಕೋಣಿಗೆ ತಿಳಿಸಲು ದೂರವಾಣಿ ಸಂಖ್ಯೆ - 08258-236333, 0824-2220526, 0824- 2220801,22212108 ಗೆ ಸಂಪರ್ಕಿಸುವಂತೆ ಮೂಡುಬಿದಿರೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Post a Comment

0 Comments