ಸಂವಾದಗಳ ಮೂಲಕ ಶೈಕ್ಷಣಿಕ ವೃದ್ಧಿ’

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ:ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್

‘ಸಂವಾದಗಳ ಮೂಲಕ ಶೈಕ್ಷಣಿಕ ವೃದ್ಧಿ’

 


ಮೂಡುಬಿದಿರೆ : ‘ಚರ್ಚೆ- ಸಂವಾದಗಳ ಮೂಲಕ ಮಾತ್ರ ಶೈಕ್ಷಣಿಕ ವಿಚಾರಗಳು ಶ್ರೇಷ್ಠವಾಗಲು ಸಾಧ್ಯ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. 

ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಶಿಕ್ಷಕರ ಸಂಘ (ಎಂಯು ಸಿಟಿಎ- ಮುಕ್ತ) ಹಾಗೂ ಧವಳ ಕಾಲೇಜಿನ ವಾಣಿಜ್ಯ ವಿಭಾಗದ ಸಹಯೋಗದಲ್ಲಿ ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗವು ಕಾಲೇಜಿನ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ಬಿಕಾಂನ ಐದನೇ ಸೆಮಿಸ್ಟರ್‌ನ ‘ನೂತನ ಶಿಕ್ಷಣ ನೀತಿಯ ಪಠ್ಯಕ್ರಮದ’ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು..

‘ಶೈಕ್ಷಣಿಕ ಕ್ಷೇತ್ರದಲ್ಲಿ ಯಾವುದೇ ಹೊಸ ವಿಚಾರಗಳನ್ನೂ ವಿಧ್ಯಾರ್ಥಿಗಳು ಮತ್ತು ಶಿಕ್ಷಕರು ಒಡಗೂಡಿ ಚರ್ಚಿಸಿದಾಗ ಮಾತ್ರ ಉತ್ತಮವಾಗಿ ಪ್ರಭಾವ ಬೀರಲು ಸಾಧ್ಯ’ ಎಂದರು. 

‘ನಮ್ಮಲ್ಲಿನ ಚರ್ಚೆ ಮತ್ತು ಯೋಚನೆಗಳು ಮುಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವಂತಿರಬೇಕು. ವಿಷಯವನ್ನು ಆಳವಾಗಿ ಅಧ್ಯಯನ ನಡೆಸುವುದು ಮುಖ್ಯ’ ಎಂದರು.

ಮುಕ್ತ ಸಂಘದ ಅಧ್ಯಕ್ಷ ಪ್ರೊ. ಪಾರ್ಶ್ವನಾಥ ಅಜ್ರಿ ಮಾತನಾಡಿ, ‘ಅನೇಕ ಶಿಕ್ಷಣ ಸಂಸ್ಥೆಗಳು ನೂತನ ಶಿಕ್ಷಣ ನೀತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಉಪನ್ಯಾಸಕರು ಈ ಕುರಿತು ಅರಿವು ಮೂಡಿಸಬೇಕು’ ಎಂದರು.  

ಮುಕ್ತ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ. ಲೂಯಿಸ್ ಮನೋಜ್ , ಸಹ ಕಾರ್ಯದರ್ಶಿ ಆರ್.ರವಿ, ಕೋಶಾಧಿಕಾರಿ ಸ್ಮಿತಾ, ಸಹ ಕಾರ್ಯದರ್ಶಿ ರೋಶನಿ ಯಶ್ವಂತ್, ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ಸಂಯೋಜಕಿ ಶರ್ಮಿಳಾ ಕುಂದರ್ ಇದ್ದರು.

ಕರ‍್ಯಕ್ರಮದಲ್ಲಿ ಮಂಗಳೂರು ವಿವಿಯ ೮೦ಕ್ಕೂ ಅಧಿಕ ಕಾಲೇಜುಗಳ ೪೦೨ ವಾಣಿಜ್ಯ ಉಪನ್ಯಾಸಕರು ಕರ‍್ಯಗಾರದಲ್ಲಿ ಪಾಲ್ಗೊಂಡರು. ಹತ್ತು ವಿಷಯವಾರು ಪತ್ರಿಕೆಗಳ ಮೇಲೆ ವಿವಿಧ ಸಂಪನ್ಮೂಲಕ ವ್ಯಕ್ತಿಗಳು ಕರ‍್ಯಾಗಾರ ನಡೆಸಿಕೊಟ್ಟರು. 

ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಅಮೃತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments