ಪಡಿತರ ಚೀಟಿ ತಿದ್ದುಪಡಿಗೆ ಅವಧಿ ವಿಸ್ತರಿಸುವಂತೆ ಜವನೆರ್ ಬೆದ್ರದಿಂದ ಮನವಿ

ಜಾಹೀರಾತು/Advertisment
ಜಾಹೀರಾತು/Advertisment

 ಪಡಿತರ ಚೀಟಿ ತಿದ್ದುಪಡಿಗೆ ಅವಧಿ ವಿಸ್ತರಿಸುವಂತೆ ಜವನೆರ್ ಬೆದ್ರದಿಂದ ಮನವಿ 




ಮೂಡುಬಿದಿರೆ: ರಾಜ್ಯ ಸರಕಾರವು ಪಡಿತರ ಚೀಟಿ ತಿದ್ದುಪಡಿಗೆ  ನಿಗಧಿ ಪಡಿಸಿದ ದಿನಾಂಕಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಎರಡು ದಿನಗಳಲ್ಲಿ ಯಾವುದೇ ತಿದ್ದುಪಡಿ ಸಾಧ್ಯವಾಗಲಿಲ್ಲ. ಈ ಸಮಸ್ಯೆಯಿಂದಾಗಿ ಅನೇಕ ಮಂದಿ ಪಡಿತರ ಚೀಟಿ ತಿದ್ದುಪಡಿ ಮಾಡಲು ಅಸಾಧ್ಯವಾಗಿದೆ. ಜಿಲ್ಲಾಧಿಕಾರಿಗಳು, ಆಹಾರ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ನೀಡಬೇಕು ಹಾಗೂ ತಿದ್ದು ಪಡಿ ಅವಧಿಯನ್ನು ವಿಸ್ತರಿಸಬೇಕೆಂದು ಮೂಡುಬಿದಿರೆಯ ಜವನೆರ್ ಬೆದ್ರ ಯುವ ಸಂಘಟನೆಯ ಸಂಸ್ಥಾಪಕ ಅಮರ್ ಕೋಟೆ ನೇತೃತ್ವದ ನಿಯೋಗವು ತಾಲೂಕು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಬುಧವಾರ  ಮನವಿ ಸಲ್ಲಿಸಿತು.


ಮೂಡುಬಿದಿರೆ ಮಾತ್ರವಲ್ಲದೆ ಇಡೀ ರಾಜ್ಯದಾದ್ಯಂತ ಈ ಸಮಸ್ಯೆ ಇರುವುದರಿಂದಾಗಿ ತಿದ್ದುಪಡಿ ವ್ಯವಸ್ಥೆಯನ್ನು ಖಾಯಂ ಆಗಿ ಚಾಲ್ತಿಯಲ್ಲಿರುವಂತೆ ಸರಕಾರ ಕ್ರಮ ವಹಿಸಬೇಕೆಂದು ಒತ್ತಾಯಿಸಿದೆ.

ನಿಯೋಗದಲ್ಲಿ ಸಂಚಾಲಕ ನಾರಾಯಣ ಪಡುಮಲೆ, ಸದಸ್ಯರಾದ ಸಂಪತ್ ಪೂಜಾರಿ ನೆತ್ತೋಡಿ, ರಂಜಿತ್ ಶೆಟ್ಟಿ, ಅಖಿಲೇಶ್, ಸಾಕ್ಷತ್ ಇದ್ದರು.

Post a Comment

0 Comments