ಅಶ್ವತ್ಥಪುರ ಕಡ್ಪಲಗುರಿಯಲ್ಲಿ ಮೊಸರು ಕುಡಿಕೆ ಉತ್ಸವ, ವಿವಿಧ ಸ್ಪರ್ಧೆಗಳು ಹು

ಜಾಹೀರಾತು/Advertisment
ಜಾಹೀರಾತು/Advertisment

 ಅಶ್ವತ್ಥಪುರ ಕಡ್ಪಲಗುರಿಯಲ್ಲಿ ಮೊಸರು ಕುಡಿಕೆ ಉತ್ಸವ, ವಿವಿಧ ಸ್ಪರ್ಧೆಗಳು 



ಮೂಡುಬಿದಿರೆ: ಶ್ರೀ ಕೃಷ್ಣ ಫ್ರೆಂಡ್ಸ್ ಟ್ರಸ್ಟ್ (ರಿ) ಕಡ್ಪಲಗುರಿ ಅಶ್ವತ್ಥಪುರ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 30ನೇ ವರ್ಷದ ಮೊಸರು ಕುಡಿಕೆ ಉತ್ಸವವು ವಿವಿಧ ಸ್ಪರ್ಧೆಗಳೊಂದಿಗೆ ವಿಜೃಂಭನೆಯಿಂದ ಗುರುವಾರ ನಡೆಯಿತು.



 ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ಭಟ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು.



 ಜಿ.ಪಂ.ನ ನಿಕಟಪೂರ್ವ ಸದಸ್ಯ ಜನಾರ್ದನ ಗೌಡ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜಗತ್ತಿನ ಮೊತ್ತ ಮೊದಲ ಮನೋಚಿಕಿತ್ಸಾಲಯ ಶ್ರೀ ಕೃಷ್ಣ. ಅಂತಹ ಮನೋಚಿಕಿತ್ಸಕ ಮನೋಭಾವವನ್ನು ಹೊಂದಿರುವ ಗೊಲ್ಲರ ಮನೆಯ  ಹುಡುಗ ಜಗದ್ವಂದ್ಯವಾಗುತ್ತಾನೆಂದರೆ ಅದು ಹಿಂದೂ ಧರ್ಮದಲ್ಲಿ ಮಾತ್ರ ಸಾಧ್ಯ.



  ಸಂಘರ್ಷಮಯ ವಾತಾವರಣದಲ್ಲೂ ಕೂಡಾ ಸಂಧಾನದ ಮೋಡಿಯಲ್ಲಿ ಭಗವಂತ ಏನನ್ನೂ ಮಾಡಬಲ್ಲ, ಯಾಕೆ ಮಾಡಬಲ್ಲ ಎನ್ನುವಂತೆ ತೋರಿಕೊಟ್ಟ ದಾರ್ಶನಿಕ ಶ್ರೀ ಕೃಷ್ಣ. ಈತನ ಉತ್ಸವ ಮಾಡಿ ನಾವು ಕೂಡಾ ಮೊಸರಾಗಿ ಕಡೆಯುವ ರೀತಿಯಲ್ಲಿ ನಮ್ಮನ್ನು ನಾವು ಮಂಥನ ಮಾಡಿಕೊಳ್ಳುವ, ನಮ್ಮನ್ನು ನಾವು ತಡೆದುಕೊಳ್ಳುವ ರೀತಿಯಲ್ಲಿ ಇರಲಿ. ನಮ್ಮ ಹೃದಯದ ಭಾವನೆಗಳನ್ನು ಕಡೆದಾಗ ಉದ್ದೀಪನಗೊಳ್ಳುವಂತಹ ಭಕ್ತಿ, ಪ್ರೇಮದ ರುಚಿಯನ್ನು ನೀಡುವಂತಹ‌ ಸಂದರ್ಭ ಈ ಸಂಘಟನೆಗೆ ಬರಲಿ ಎಂದು ಶುಭ ಹಾರೈಸಿದರು.

ಸನ್ಮಾನ: ಸಮಿತಿಯ ಅಧ್ಯಕ್ಷ ಲಿಂಗಪ್ಪ ಗೌಡ ಅಧ್ಯಕ್ಷತೆಯಲ್ಲಿ ಅಶ್ವತ್ಥಪುರ ಶ್ರೀ ವಾಣಿ ವಿಲಾಸ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ವಿ.ಎ., ಅಂಗನವಾಡಿಯ ನಿವೃತ್ತ ಕಾರ್ಯಕರ್ತೆ ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು.

 ಅಶ್ವತ್ಥಪುರ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಮೇಸ್ತ್ರಿ ಕುಕ್ಕುದಡಿ, ಶ್ರೀ ಕೃಷ್ಣ ಫ್ರೆಂಡ್ಸ್ ಟ್ರಸ್ಟ್ ನ ಗೌರವಾಧ್ಯಕ್ಷ ಗೋಪಾಲ ಕಡ್ಪಲಗುರಿ, ಉಪಾಧ್ಯಕ್ಷ, ತೆಂಕಮಿಜಾರು ಗ್ರಾ.ಪಂ.ನ ಸದಸ್ಯ ರಾಮಚಂದ್ರ ಕಡ್ಪಲಗುರಿ,  ಕೋಶಾಧಿಕಾರಿ ಕೃಷ್ಣ ಪಂಜುರ್ಲಿಗುಡ್ಡೆ ಉಪಸ್ಥಿತರಿದ್ದರು.

  ವೈಷ್ಣವಿ ಸನ್ಮಾನ ಪತ್ರ ವಾಚಿಸಿದರು. ಪ್ರಸಾದ್ ಅಶ್ವತ್ಥಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಂತರ ಪುಟಾಣಿ ಮಕ್ಕಳಿಗಾಗಿ ಮುದ್ದು ಕೃಷ್ಣ, ಬಾಲಕೃಷ್ಣ ಸ್ಪರ್ಧೆ, ಬಾಲಕ ಬಾಲಕಿಯರಿಗೆ ಮಡಕೆ ಒಡೆಯುವ, ತಪ್ಪಂಗಾಯಿ, ಮಹಿಳೆಯರಿಗಾಗಿ ಹಗ್ಗಜಗ್ಗಾಟ ಸಹಿತ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. 

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ  ಗೌರವ ಮಾರ್ಗದರ್ಶಕ ಅಶ್ವತ್ಥಾಮ ವಿ.ಎಸ್.ಸಂತೆಕಟ್ಟೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪಂಜುರ್ಲಿಗುಡ್ಡೆ, ಹಿರಿಯ ಮಾರ್ಗದರ್ಶಕರಾದ ಅಣ್ಣಿ ಶೆಟ್ಟಿ ಕುಕ್ಕುದಡಿ, ಬಾಲಕೃಷ್ಣ ಕಾದ್ಯಡ್ಕ ಅತಿಥಿಗಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. 


ಬಾಲಕೃಷ್ಣ  ಸ್ಪರ್ಧೆಯ ವಿಜೇತರು: ಆದ್ಯ ವಿ.ಪ್ರಥಮ, ಮನೀಪ್ ದ್ವಿತೀಯ.


ಮುದ್ದುಕೃಷ್ಣ ಸ್ಪರ್ಧೆಯ ವಿಜೇತರು: ಲಿನೀಶ್ ಎಲ್.ಎಸ್.ಪಂಜುರ್ಲಿಗುಡ್ಡೆ ಪ್ರಥಮ, ರಿಶೀತ್ ಅಶ್ವತ್ಥಪುರ ದ್ವಿತೀಯ ಬಹುಮಾನವನ್ನು ಗಳಿಸಿರುತ್ತಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವೀಚಾರಕಿ ಕಾತ್ಯಾಯಿನಿ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಹಾಗೂ ಆಂಗಿಕಂ ಡ್ಯಾನ್ಸ್ ಕ್ಲಾಸ್ ನ ಶಿಕ್ಷಕ ಚೇತನ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ನಿರ್ವಹಣೆ ಪ್ರಸಾದ್ ಅಶ್ವತ್ ಪುರ ಮತ್ತು ಪ್ರವೀಣ್ ಅಶ್ವತ್ ಪುರ

Post a Comment

0 Comments