ಮೂಡುಬಿದಿರೆ ಗಣೇಶೋತ್ಸವಕ್ಕೆ ಶುಭ ಹಾರೈಸಿದ ಕ್ರೈಸ್ತ ಬಾಂಧವರು
ಮೂಡುಬಿದಿರೆಯಲ್ಲಿ ನಡೆಯುತ್ತಿರುವ 60 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭಕ್ಕೆ ಕಥೊಲಿಕ್ ಸಭಾ ಮೂಡುಬಿದಿರೆ ವಲಯ ಸಮಿತಿಯ ಸದಸ್ಯರು ಅಲ್ಲಿಗೆ ಶನಿವಾರ ತೆರಳಿ ಶುಭ ಹಾರೈಸಿದರು .
ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಮೂಡಬಿದ್ರಿ ವಲಯ ಸಮಿತಿಯ ಅಧ್ಯಕ್ಷ ಅವಿಲ್ ಡಿಸೋಜ, ವಲಯದ ರಾಜಕೀಯ ಸಂಚಾಲಕ ರಾಜೇಶ್ ಕಡಲಕೆರೆ, ಉಪಾಧ್ಯಕ್ಷರಾದ ಓಲ್ವಿನ್ ರೊಡ್ರಿಗಸ್, ಕಥೊಲಿಕ್ ಸಭಾ ಮೂಡುಬಿದಿರೆ ವಲಯ ಸಮಿತಿಯ ಮಾಜಿ ಅಧ್ಯಕ್ಷ ಆಂಡ್ರ್ಯೂ ಡಿಸೋಜ, ಆಂಡ್ರ್ಯೂ ನೊರೊನ್ಹಾ, ಓಲ್ವಿನ್ ಮಿನೇಜಸ್, ವಲೇರಿಯನ್ ಸಿಕ್ವೇರಾ . ಬೆಳುವಾಯಿ ಕಥೊಲಿಕ್ ಸಭಾ ಅಧ್ಯಕ್ಷ ಫಿಲಿಪ್ ರೇಗೊ, ಗಂಟಾಲ್ಕಟ್ಟೆ ಕಥೊಲಿಕ್ ಸಭಾ ಅಧ್ಯಕ್ಷ ಅನಿಲ್ ಮೆಂಡೊನ್ಸಾ, ಮೂಡುಬಿದಿರೆ ಕಥೊಲಿಕ್ ಸಭಾ ಅಧ್ಯಕ್ಷ ಹೆರ್ರಿ ರೇಗೊ, ಸಂಪಿಗೆ ಕಥೊಲಿಕ್ ಸಭಾ ಅಧ್ಯಕ್ಷ ರಿಚಾರ್ಡ್ ಕಾರ್ಡೋಜ, ಕಥೊಲಿಕ್ ಸಭಾ ತಾಕೊಡೆಯ ಅಧ್ಯಕ್ಷ ಲೋಯ್ಡ್ ರೇಗೊ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments