ಮೂಡುಬಿದಿರೆ: ವಿವಿಧ ಕ್ಲಬ್ ಗಳಿಂದ ಮುದ್ದುಕೃಷ್ಣ ಸ್ಪರ್ಧೆ
ಮೂಡುಬಿದಿರೆ: ಇಲ್ಲಿನ ರೋಟರ್ಯಾಕ್ಟ್ ಕ್ಲಬ್, ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ಆಹ್ವಾನಿತ ಸರಕಾರಿ ಅಂಗನವಾಡಿ ಮಕ್ಕಳಿಗಾಗಿ ಸಮಾಜ ಮಂದಿರದಲ್ಲಿ ಶನಿವಾರ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು.
ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ ಬಿ. ಸ್ಪರ್ಧೆಗೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು.
ಜಿಲ್ಲಾ 3181ರ ಡಿಆರ್ ಸಿಸಿ ಮೊಹಮ್ಮದ್ ಅಸ್ಲಾಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸರಿತಾ ಆಶೀರ್ವಾದ್, ರೋಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷ ಫರಾಝ್ ಬೆದ್ರ, ಚೆಯರ್ ಮೆನ್ ಪ್ರಸಾದ್ ಶೆಟ್ಟಿ ಅಂಗನವಾಡಿ ಮೇಲ್ವೀಚಾರಕಿ ಶುಭ ಉಪಸ್ಥಿತರಿದ್ದರು.
ಶ್ರವಣ್ ಸ್ವಾಗತಿಸಿದರು.ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ವರುಣ್ ವಂದಿಸಿದರು.
100 ಕ್ಕೂ ಅಧಿಕ ಮಕ್ಕಳು "ಮುದ್ದುಕೃಷ್ಣ"ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಡ್ಯಾನ್ಸರ್ ಗಳಾದ ಅರ್ಪಿತ್, ಪ್ರಿಯೇಶ್ ಮತ್ತು ರಶ್ಮಿತಾ ತೀರ್ಪುಗಾರರಾಗಿ ಸಹಕರಿಸಿದ್ದರು.
0 Comments