ಬನ್ನಡ್ಕ ಶಾರದೋತ್ಸವ - 2023ರ ಆಮಂತ್ರಣ ಪತ್ರಿಕೆ ಬಿಡುಗಡೆ
ಮೂಡುಬಿದಿರೆ: ಸಾರ್ವಜನಿಕ ಶ್ರೀ ಶಾರದಾ ಉತ್ಸವ ಬನ್ನಡ್ಕ ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಬನ್ನಡ್ಕ ದೇವಸ್ಥಾನದಲ್ಲಿ ಅನುವಂಶಿಕ ಮೊಕ್ತೇಸರ ಮಾರ್ನಾಡ್ ಬೀಡು ಸುಕುಮಾರ್ ಬಲ್ಲಾಳ್ ಮತ್ತು ದಯಾನಂದ ಪೈ ಬಿಡುಗಡೆ ಗೊಳಿಸಿದರು .
ನಂತರ ಮಾಗಣೆ ಮಾರೂರು ಶ್ರೀ ಗೋಪಾಲಕೃಷ್ಣ ದೇವರ ಸನ್ನಿದಿಗೆ ಭೇಟಿ ನೀಡಿ ಪ್ರಾರ್ಥಿಸಲಾಯಿತು.
ಬನ್ನಡ್ಕ ಕ್ಷೇತ್ರದ ಆಡಳಿತ ಮೊಕ್ತೇಸರ ಮಾರ್ನಾಡ್ ಬೀಡು ಸುಕುಮಾರ್ ಬಲ್ಲಾಳ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್ ಪದಾಧಿಕಾರಿಗಳಾದ ಸಂತೋಷ್ ನಾಯಕ್ , ಸುಧಾಕರ ಆಚಾರ್ಯ, ಸುರೇಶ್ ಅಂಚನ್ , ಪೀತಮ್ ಬನ್ನಡ್ಕ , ಅಕ್ಷಯ್ ಬನ್ನಡ್ಕ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments