ಸರ್ವೋದಯ ಫ್ರೆಂಡ್ಸ್ ನ 15ನೇ ವರ್ಷದ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 ಸರ್ವೋದಯ ಫ್ರೆಂಡ್ಸ್ ನ 15ನೇ ವರ್ಷದ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ



ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೆಶೋತ್ಸವದ ಪ್ರಯುಕ್ತ ಸರ್ವೋದಯ ಫ್ರೆಂಡ್ಸ್ ಬೆದ್ರ(ರಿ) ಇದರ 15 ನೇ ವರ್ಷದ  ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆಯು ಶನಿವಾರ ಸಂಜೆ ಬಿಲ್ಲವ ಸಂಘದಲ್ಲಿ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ನಮ್ಮ ದೇಶ ಯುವ ರಾಷ್ಟ್ರ. ಇಲ್ಲಿ ಯುವಶಕ್ತಿಯಿದೆ. ಸಮಾಜದ ಎಲ್ಲಾ ಆಯಾಮಗಳಲ್ಲಿ ಕೆಲಸವನ್ನು ಮಾಡಿಕೊಂಡು ಬಂದಾಗ ದೇಶ ಪರಿವರ್ತನೆಯಾಗಲು ಸಾಧ್ಯ. ಒಂದು ಸಂಘಟನೆ ಆರಂಭವಾಗುವುದು ಜ್ಞಾನ ಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜನಶಕ್ತಿ ಹಾಗೂ ಧನಶಕ್ತಿ ಎಂಬ ಈ 5 ಶಕ್ತಿಗಳು ಇದ್ದಾಗ ಮಾತ್ರ ಸಂಘಟನೆಗಳು ಯಶಸ್ವಿಯಾಗಲು ಸಾಧ್ಯ. ಈ ಶಕ್ತಿಗಳನ್ನು ಸಮಾಜಕ್ಕೆ ತಂದು  ಒಳ್ಳೆಯ ಭಾವನೆ, ಏಕತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಾವನಾತ್ಮಕವಾಗಿ ತೊಡಗಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ಈ ಸಂಘಟನೆಯು ಮುಂದಿನ ದಿನಗಳಲ್ಲಿ ನಿಸ್ವಾರ್ಥವಾಗಿ ಸಮಾಜದಲ್ಲಿ ಉತ್ತಮ ಕೆಲಸವನ್ನು ಮಾಡುವಂತ್ತಾಗಲಿ ಎಂದು ಶುಭ ಹಾರೈಸಿದರು.



ಮೂಡುಬಿದಿರೆ ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘದ  ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸದುದ್ದೇಶವನ್ನು ಇಟ್ಟುಕೊಂಡು ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಿಕೊಂಡು ಬಂದಾಗ ಜನರಿಗೆ ನಂಬಿಕೆ ಮೂಡುತ್ತದೆ ಆ ನಂಬಿಕೆಯನ್ನು ಉಳಿಸಿಕೊಳ್ಳವಂತಹ ಕೆಲಸ ಮಾಡುವಂತ್ತಾಗಲಿ ಎಂದರು.

ಸಂಘಟನೆಯ ಗೌರವಾಧ್ಯಕ್ಷ ರಂಜಿತ್ ಪೂಜಾರಿ, ಪುರಸಭಾ ಸ್ಥಾಯಿ ಸಮಿತಿಯ ನಿರ್ಗಮನ  ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯ ರಾಜೇಶ್ ನಾಯ್ಕ್, ಪುತ್ತಿಗೆ ಗ್ರಾ.ಪಂ.ಸದಸ್ಯ ಮುರಳೀಧರ ಕೋಟ್ಯಾನ್, ಸರ್ವೋದಯ ಫ್ರೆಂಡ್ಸ್ ನ ಅಧ್ಯಕ್ಷ ಗುರು ದೇವಾಡಿಗ, ಎಬಿವಿಪಿ ತಾಲೂಕು ಸಂಚಾಲಕ ಆದಿತ್ಯ, ವಿಹಿಂಪ ಬಜರಂಗದಳ ಮೂಡುಬಿದಿರೆ ಪ್ರಖಂಡದ ಅಖಂಡ ಪ್ರಮುಖ್  ಸಂಜಯ್ ಉಪಸ್ಥಿತರಿದ್ದರು.

  ಅಕ್ಷಯ್ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 14 ವರ್ಷಗಳ ಹಿಂದೆ ಉತ್ತಮ ಉದ್ದೇಶವನ್ನು ಇಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ಈ ಸರ್ವೋದಯ ಫ್ರೆಂಡ್ಸ್  ಈಗಾಗಲೇ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲೂ ಜನ ಸೇವೆಯೊಂದಿಗೆ ಉತ್ತಮ ಕಾರ್ಯಗಳನ್ನು ಜಾರಿಗೊಳಿಸುವ ಯೋಜನೆಗಳನ್ನು ಹಾಕಿಕೊಂಡಿದ್ದು ಅದನ್ನು ಕಾರ್ಯಗತಗೊಳಿಸಲಿದೆ ಎಂದರು. ರಂಜನ್ ರೈ ವಂದಿಸಿದರು ಕಾರ್ಯಕ್ರಮ ನಿರೂಪಣೆ ಭವಿಷ್ಯತ್ ಕೋಟ್ಯಾನ್ .

Post a Comment

0 Comments