ಮಾರ್ಗದರ್ಶನದಿಂದ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ: ಕೆ.ಪಿ. ಪುತ್ತೂರಾಯ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಮಾರ್ಗದರ್ಶನದಿಂದ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ: ಕೆ.ಪಿ. ಪುತ್ತೂರಾಯ



ಮೂಡುಬಿದಿರೆ: ‘ಪಿಯುಸಿ ಶಿಕ್ಷಣವು ಬದುಕಿನ ಮಹತ್ವದ ಅಡಿಪಾಯ. ಈ ಹಂತದಲ್ಲಿ ಸಮರ್ಪಕ ಮಾರ್ಗದರ್ಶನದಿಂದ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ’ ಎಂದು ವಾಗ್ಮಿ, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಪಿ.ಪುತ್ತೂರಾಯ ಹೇಳಿದರು. 

ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರೇರಣಾತ್ಮಕ ಕರ‍್ಯಕ್ರಮ- ‘ಸ್ಪೂರ್ತಿ’ಯಲ್ಲಿ ಅವರು ಮಾತನಾಡಿದರು. 

ಪೋಷಕರ ಕನಸನ್ನು ಈಡೇರಿಸುವುದೂ ವಿದ್ಯಾರ್ಥಿಗಳ ಕನಸಾಗಬೇಕು. ಪಠ್ಯದ ಜೊತೆ ಅನುಭವವೂ ನಮಗೆ ಶಿಕ್ಷಣ ನೀಡುತ್ತದೆ. ಅನುಭವವೂ ಒಳ್ಳೆಯ ಗುರು. ವಿದ್ಯಾರ್ಥಿ ಜೀವನವು ನಮ್ಮನ್ನು ಮಾನವನಾಗಿ ಪರಿವರ್ತಿಸುತ್ತದೆ ಎಂದರು. 

‘ಯಶಸ್ಸಿಗೆ ಬೌದ್ಧಿಕ ಪ್ರಗತಿ ಅವಶ್ಯ. ಶಿಕ್ಷಣಕ್ಕೆ ಜಾತಿ ಇಲ್ಲ. ಜಾತಿಗೂ ಜ್ಞಾನಕ್ಕೂ ಸಂಬಂಧವಿಲ್ಲ. ಎಲ್ಲರೂ ಜ್ಞಾನ ಪಡೆಯಲು ಅರ್ಹರು. ಆದರೆ, ಕಲಿಕೆಯ ಹಸಿವು ಇರಬೇಕು. ಅದು ವ್ಯಕ್ತಿತ್ವ ವಿಕಸನಕ್ಕೂ ರಹದಾರಿಯಾಗುತ್ತದೆ’ ಎಂದರು. 

ಪ್ರಾಂಶುಪಾಲ ಪ್ರೋ ಎಂ ಸದಾಕತ್, ಉಪ ಪ್ರಾಂಶುಪಾಲೆ ಜಾನ್ಸಿ,  ವಿವಿಧ ವಿಭಾಗಗಳ ಸಂಯೋಜಕರು ಹಾಗೂ ಡೀನ್‌ಗಳು ಇದ್ದರು. 

ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments

Advertisement