ಮೂಡುಬಿದಿರೆ ಸೌಹಾರ್ದ ಫ್ರೆಂಡ್ಸ್ ವತಿಯಿಂದ ರಕ್ತದಾನ ಶಿಬಿರ
ಮೂಡುಬಿದಿರೆ : ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮೂಡುಬಿದಿರೆಯ ಸೌಹಾರ್ದ ಫ್ರೆಂಡ್ಸ್, ಪೊಲೀಸ್ ಠಾಣೆ, ರೋಟರಿ, ಆಳ್ವಾಸ್ ಬ್ಲಡ್ ಬ್ಯಾಂಕ್ ವತಿಯಿಂದ ಸೋಮವಾರ ಸಮಾಜ ಮಂದಿರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಮೂಡುಬಿದಿರೆ ಠಾಣೆಯ ಪೊಲೀಸ್ ನಿರೀಕ್ಷಕ ನಿರಂಜನ್ ಅವರು ದೀಪ ಬೆಳಗಿಸುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿ ರಕ್ತದಾನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಹಾರ್ದ ಫ್ರೆಂಡ್ಸ್ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ ಅವರು ಸೌಹಾರ್ದ ಫ್ರೆಂಡ್ಸ್ ಹಮ್ಮಿಕೊಂಡ ಸಾಮಾಜಿಕ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಪೊಲೀಸ್ ಉಪನಿರೀಕ್ಷಕರಾದ ದಿವಾಕರ ರೈ,ಸಿದ್ದಪ್ಪ, ಸಿ.ಎಚ್ .ಅಬ್ದುಲ್ ಗಫೂರ್,ರೋಯಲ್ ಹಮೀದ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರಾದ ಹನೀಫ್ ರಹ್ಮಾನಿಯ ಹಾಗೂ ಇರ್ಫಾನ್ ಬೆದ್ರ ಭಾಗವಹಿಸಿದವರನ್ನು ಸ್ವಾಗತಿಸಿದರು.
ಸೌಹಾರ್ದ ಫ್ರೆಂಡ್ಸ್ ನ ಅರ್ಷದ್ ಪಡುಮಾರ್ನಾಡ್ ,ನೌಷಾದ್,ಎಲ್.ಆರ್.ರಿಝ್ವಾನ್, ಬ್ಲಡ್ ಬ್ಯಾಂಕ್ ನ ರಾಜೇಶ್ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಮೂಡುಬಿದಿರೆ ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಹಿತ ಹಲವಾರು ಮಂದಿ ರಕ್ತದಾನ ಮಾಡಿದರು.
0 Comments