ವಾಲ್ಪಾಡಿ ಗ್ರಾ.ಪಂ.ನೂತನ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ಉಪಾಧ್ಯಕ್ಷರಾಗಿ ಗಣೇಶ್ ಬಿ.ಅಳಿಯೂರು
ಮೂಡುಬಿದಿರೆ:
ವಾಲ್ಪಾಡಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ಹಾಗೂ ಉಪಾಧ್ಯಕ್ಷರಾಗಿ ಗಣೇಶ್ ಬಿ. ಅಳಿಯೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
9 ಮಂದಿ ಸದಸ್ಯ ಬಲ ಹೊಂದಿರುವ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ 4 ಮಂದಿ ಹಾಗೂ ಬಿಜೆಪಿ ಬೆಂಬಲಿತ 5 ಮಂದಿ ಸದಸ್ಯರಿದ್ದು ಪ್ರತಿಸ್ಪರ್ಧಿಗಳಿಲ್ಲದೆ ಇಬ್ಬರೂ ಅವಿರೋಧ ಆಯ್ಕೆಯಾಗಿದ್ದಾರೆ.
0 Comments