ವಿಜಯ್ ಪತ್ನಿ ಸ್ಪಂದನಾ ಸಾವಿಗೆ ಕಾರಣವೇನು? ಇಷ್ಟು ಸಣ್ಣ ವಯಸ್ಸಿಗೆ ಹೀಗಾಗಿದ್ದು ಹೇಗೆ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.!

ಜಾಹೀರಾತು/Advertisment
ಜಾಹೀರಾತು/Advertisment

 ವಿಜಯ್ ಪತ್ನಿ ಸ್ಪಂದನಾ ಸಾವಿಗೆ ಕಾರಣವೇನು? ಇಷ್ಟು ಸಣ್ಣ ವಯಸ್ಸಿಗೆ ಹೀಗಾಗಿದ್ದು ಹೇಗೆ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.!



ಶ್ರೀಮತಿ ಸ್ಪಂದನಾ ವಿಜಯ್ ರಾಘವೇಂದ್ರ. ಕನ್ನಡ ಚಲನಚಿತ್ರದ ಹೆಸರಾಂತ ನಟ ವಿಜಯ್ ರಾಘವೇಂದ್ರರವರ ಧರ್ಮಪತ್ನಿ. ಕೇವಲ 39 ವಯಸ್ಸಿನ ಚೆಲುವೆ. ಕಣ್ಣು ಕುಕ್ಕುವಂತಹಾ ದಾಂಪತ್ಯ ಜೀವನ ನಡೆಸುತ್ತಿದ್ದ ವಿಜಯ್ ರಾಘವೇಂದ್ರ ಕುಟುಂಬಕ್ಕೆ ದಿಢೀರ್ ಆಘಾತಕಾರಿ ಸುದ್ಧಿ. ಬ್ಯಾಂಕಾಕ್‍ಗೆ ತೆರಳಿದ್ದ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವುದು. ಕನ್ನಡ ಚಲನಚಿತ್ರ ರಂಗ ಮಾತ್ರವಲ್ಲದೆ ಡಾ.ರಾಜ್ ಕುಮಾರ್ ಕುಟುಂಬ, ಬಿಕೆ ಶಿವರಾಮ್ ಕುಟುಂಬವೂ ಶೋಕ ಸಾಗರದಲ್ಲಿ ಮುಳುಗಿ ಹೋಗಿತ್ತು. ಸುಂದರ ಸಂಸಾರ ನಡೆಸುತ್ತಿದ್ದ ಈ ಕುಟುಂಬಕ್ಕೆ ಭಗವಂತನು ಅತಿದೊಡ್ಡ ಶಾಕ್ ನೀಡಿದ್ದ.


ಸ್ಪಂದನಾ ಸಾವಿಗೆ ಕಾರಣವೇನು.?

ಹೌದು, ಸ್ಪಂದನಾ ಮೃತರಾಗಿದ್ದು ಹೃದಯಾಘಾತದಿಂದ. ಆದರೆ ಇದರ ಹಿಂದೆ ಭಯಾನಂಕ ಅಂಶವಿದೆ. ದಪ್ಪ ಆಗಿದ್ದೇನೆ, ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಸಾಹಸಕ್ಕೆ ಕೈ ಹಾಕಿದ್ದೇ ಸ್ಪಂದನಾ ಸಾವಿಗೆ ಕಾರಣವಾಗಿದೆ. ಕಳೆದ ಕೆಲ ಕಾಲದಿಂದ ನಿರಂತರವಾಗಿ ಜಿಮ್ ಮಾಡಿ ಡಯಟ್ ಮಾಡುತ್ತಿದ್ದ ಸ್ಪಂದನಾ ಬರೋಬ್ಬರಿ 16 ಕೆಜಿ ತೂಕವನ್ನು ಕಡಿಮೆ ಮಾಡಿಸಿಕೊಂಡಿದ್ದರು. ತೆಳ್ಳನೆ ಮತ್ತು ಫಿಟ್ ಕಾಣಬೇಕೆಂಬ ಆಸೆಗೆ ಜೀವವೇ ಹೋಯಿತಾ ಎನ್ನುವ ಪ್ರಶ್ನೆ ಕಾಡುತ್ತಿದೆ.


  ಖ್ಯಾತ ಹೃದ್ರೋಗ ತಜ್ಞೆ ವಿಜಯಲಕ್ಷ್ಮೀ ಬಾಳೇಕುಂದ್ರಿಯವರು ಹೇಳುವ ಪ್ರಕಾರ ತೂಕ ಇಳಿಸಲೋ ಅಥವಾ ಫಿಟ್ ಆಗಿ ಆಕರ್ಷಕವಾಗಿ ಕಾಣಲೋ ಇಂದಿನ ಯುವ ಸಮಾಜ ಜಿಮ್ ಮೊರೆ ಹೋಗುತ್ತಿರುವುದು ಆಘಾತಕಾರಿ ಬೆಳವಣಿಗೆ. ತೂಕ ಇಳಿಸಬೇಕೆಂದಿದ್ದರೆ ಭಾರತೀಯರೇ ಕಂಡುಕೊಟ್ಟ ದಾರಿಗಳಿವೆ. ವಾರಕ್ಕೊಮ್ಮೆ ಉಪವಾಸ ಕೂರಬೇಕು. ಕೇವಲ ಹಣ್ಣುಗಳನ್ನು ಸೇವಿಸಿ ಒಂದು ದಿನ ಕಳೆಯಬೇಕು. ಆಗ ಆರೋಗ್ಯವೂ ಚೆನ್ನಾಗಿರುತ್ತೆ ಮತ್ತು ತೂಕವೂ ಇಳಿಯುತ್ತದೆ.


  ಫಿಟ್ ಆಗಿ ಕಾಣಲು ಭಾರತೀಯರೇ ಕಂಡುಕೊಟ್ಟ ವ್ಯಾಯಾಮಗಳು, ಯೋಗಾಸನಗಳು ಬೇಕಾದಷ್ಟಿವೆ. ಇದನ್ನು ಹಿಂಬಾಲಿಸಿದರೆ ಸೌಂದರ್ಯವೂ ವೃದ್ಧಿಸುತ್ತೆ ಮತ್ತು ಆರೋಗ್ಯವೂ ಚೆನ್ನಾಗಿರುತ್ತದೆ. ಆದರೆ ಇಂದಿನ ಸಮಾಜ ಶೀಘ್ರ ಫಲಿತಾಂಶಕ್ಕಾಗಿ ಜಿಮ್ ಮೊರೆ ಹೋಗುತ್ತಿರುವುದು ಆತಂಕಕಾರಿ ಎಂದು ಅವರು ಹೇಳಿದ್ದಾರೆ.


ಮಾಹಿತಿಯ ಪ್ರಕಾರ ಸ್ಪಂದನಾ ರವರು ಬಿಪಿ ಲೋ ಆಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಿಮ್ ಗೆ ತೆರಳಿ 16 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದರು. ಪರಿಣಾಮ ಇಂದು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಏನೇ ಆಗಲಿ, ಓರ್ವ ಅದ್ಭುತ ಕುಟುಂಬದ ಸದಸ್ಯೆಯನ್ನು ಆ ಕುಟುಂಬ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಒದಗಿಸಲಿ ಎಂದು ಪ್ರಾರ್ಥಿಸೋಣ.

:ವೈಭವ ಟಿವಿ

Post a Comment

0 Comments