ರೋಟರಿ ಕ್ಲಬ್ ಮಿಡ್ ಟೌನ್ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ, ಸೇನಾನಿಗಳಿಗೆ ಸನ್ಮಾನ
ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ಸಂಸ್ಥೆಯ ವತಿಯಿಂದ ತಾಲೂಕಿನ ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಜ್ಯೋತಿನಗರ ಇಲ್ಲಿ 76ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಅಧ್ಯಕ್ಷರಾದ ರೊ|| ಮಹೇಂದ್ರ ಕುಮಾರ್ ಜೈನ್ ಮುಂದಾತ್ವದಲ್ಲಿ ಆಚರಿಸಲಾಯಿತು.
ನಿವೃತ ವೀರ ಸೇನಾನಿಗಳಾದ ಸುಬೇಧಾರ್ ಭಾಸ್ಕರ್ ಪೂಜಾರಿ ಈದು, ಮತ್ತು ನಿವೃತ ಸೇನಾನಿ ಸುಭೆಧಾರ್ ಶ್ರೀಧರ್ ಭಂಡಾರಿ ಬಸವನಕಜೆ ಅಲಂಗಾರ್ ಇವರನ್ನು ಸನ್ಮಾನಿಸಲಾಯಿತು.ಸನ್ಮಾನ ಕಾರ್ಯಕ್ರಮವನ್ನು ಸದಸ್ಯರಾದ ರೊ||ಪ್ರಶಾಂತ್ ಭಂಡಾರಿ ನಿರೂಪಿಸಿದರು.
ಶಾಲಾ ಮಕ್ಕಳಿಗೆ ಸಿಹಿತಿಂಡಿಯ ಜೊತೆಗೆ ಬಹುಮಾನವನ್ನು ಕ್ಲಬ್ ಮುಖೇನ ನೀಡಲಾಯಿತು. ನಮ್ಮ ಸಂಸ್ಥೆಯ ಕಾರ್ಯದರ್ಶಿ ರೊ||ಸಂತೋಷ್ ಶೆಟ್ಟಿ, ಎ. ಜಿ ರೊ || ಪ್ರತಾಪ್ ಕುಮಾರ್ ಜೈನ್,ಐ. ಪಿ. ಪಿ ರೊ||ಪುಷ್ಪರಾಜ್ ಜೈನ್, ಸದಸ್ಯರಾದ ಕಿಶೋರ್, ಸುಶಾಂತ್, ವಿದೇಶ್ ಹರಿಪ್ರಸಾದ್, ಜಾವೇದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
0 Comments